ಕೊಕ್ಕಡ: ಸೌತಡ್ಕದ ಶ್ರೀ ಮಹಾಗಣಪತಿ ದೇಗುಲದ ಹೊಸ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಆಯ್ಕೆಯಾಗಿದ್ದಾರೆ. ಹೊಸ ಪರಿಷ್ಕೃತ ಸಮಿತಿ ಕುರಿತ ಆದೇಶ ಮಾ. 3ರಂದು ಹೊರಬಿದ್ದ ಬೆನ್ನಲ್ಲೇ ಮಾ. 4ರಂದು ಹೊಸ ಸಮಿತಿಯ ಪದಗ್ರಹಣ ಸಮಾರಂಭ ತಹಶೀಲ್ದಾರ್ ಪೃಥ್ವಿ ಸಾನಿಕಂ ಸಮ್ಮುಖದಲ್ಲಿ ಸೌತಡ್ಕ ದೇಗುಲದಲ್ಲಿ ನಡೆಯಿತು.
ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಗಮನಾರ್ಹ. ಹಿಂದೆ 2016 – 2020ರ ಅವಧಿಯ ವ್ಯವಸ್ಥಾಪನಾ ಸಮಿತಿಗೂ ಅವರೇ ಅಧ್ಯಕ್ಷರಾಗಿದ್ದರು.
ಹೊಸ ಸಮಿತಿ ಸದಸ್ಯರ ನೇಮಕದ ಬಗ್ಗೆ ಫೆ. 18ರಂದು ಧಾರ್ಮಿಕ ದತ್ತಿ ಇಲಾಖೆ ಆದೇಶ ಪ್ರಕಟಿಸಿತ್ತು. ಆದರೆ, ಮಾರ್ಚ್ 3ರಂದು ಹೊಸ ಪರಿಷ್ಕೃತ ಆದೇಶ ಹೊರಡಿಸಿದ ದತ್ತಿ ಇಲಾಖೆ, ಉದಯ ಶಂಕರ ಶೆಟ್ಟಿ ಮತ್ತು ಪ್ರಶಾಂತ್ ರೈ ಹೆಸರನ್ನು ಸಮಿತಿಯಿಂದ ಕೈಬಿಟ್ಟಿತ್ತು. ಅವರಿಬ್ಬರ ಬದಲಿಗೆ ಪ್ರಮೋದ್ ಕುಮಾರ್ ಶೆಟ್ಟಿ ಮತ್ತು ಪ್ರಶಾಂತ್ ಕುಮಾರ್ ರನ್ನು ಹೊಸ ಸದಸ್ಯರನ್ನಾಗಿ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.