Site icon Suddi Belthangady

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ನೂತನ ವ್ಯವಸ್ಥಾಪನ ಸಮಿತಿ ಬದಲಾಯಿಸಿ ಆದೇಶ: ಹಿಂದಿನ ಆದೇಶ ಪ್ರತಿಯಲ್ಲಿದ್ದ ಇಬ್ಬರನ್ನು ಕೈಬಿಟ್ಟು ಮತ್ತಿಬ್ಬರ ಸೇರ್ಪಡೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಫೆ. 18ರಂದು ನೂತನ ವ್ಯವಸ್ಥಾಪನ ಸಮಿತಿಯನ್ನು ನೇಮಕಗೊಳಿಸಿ ನೀಡಿದ ಆದೇಶವನ್ನು ಬದಲಾವಣೆ ಗೊಳಿಸಿ 9 ಮಂದಿಯನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮರು ಆದೇಶ ನೀಡಿದೆ.

ವ್ಯವಸ್ಥಾಪನಾ ಸಮಿತಿಗೆ ನೇಮಕಗೊಂಡ ಸದಸ್ಯರ ವಿವರ: ಪರಿಶಿಷ್ಟ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪಾರಪಲಿಕೆ ಕೊಕ್ಕಡ, ಮಹಿಳಾ ಸ್ಥಾನದಿಂದ ಸಿನಿ ತಂಡಶೇರಿ ಕೊಕ್ಕಡ, ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿ ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ರೆಖ್ಯ, ಪ್ರಶಾಂತ್ ಕುಮಾರ್ ಕೊಕ್ರಾಡಿ ಹಾಗೂ ಪ್ರಧಾನ ಅರ್ಚಕ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಾರೆ.

ಈ ಹಿಂದಿನ ಆದೇಶದಲ್ಲಿದ್ದ ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು ಹಾಗೂ ಉದಯ ಶಂಕರ್ ಶೆಟ್ಟಿ ಅರಿಯಡ್ಕ ಮನೆ ಪುತ್ತೂರು ಇವರನ್ನು ಕೈಬಿಟ್ಟು ಹೊಸ ಆದೇಶದಲ್ಲಿ ಇಬ್ಬರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಮರು ಆದೇಶ ಮಾಡಲಾಗಿದೆ.

Exit mobile version