Site icon Suddi Belthangady

ಮೆಹಂದಿ ಡಿಸೈನ್ ಹಾಗೂ ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬೆಳ್ತಂಗಡಿ ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಮೆಹಂದಿ ಡಿಸೈನ್ ಹಾಗೂ ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಕಾರ್ಯಕ್ರಮವು ನಡೆಯಿತು.

ಯೋಜನೆಯ ಮಾನವ ಸಂಪನ್ಮೂಲ ಮತ್ತು ಸಿಬ್ಬಂದಿ ನಿರ್ವಹಣಾ ವಿಭಾಗದ ನಿರ್ದೇಶಕ ಸುರೇಶ್ ಮೊಯಿಲಿ ಮಾತನಾಡಿ ಮಹಿಳೆಯರು ದಿನದಲ್ಲಿ 18 ಗಂಟೆ ಮನೆಯಲ್ಲಿ ದುಡಿದರೂ ಕೂಡ ಯಾವುದೇ ಗೌರವ ಸನ್ಮಾನಗಳು ದೊರೆಯುವುದಿಲ್ಲ. ಅದೇ ಮಹಿಳೆಯರು ಇತರರಿಗೆ ಅವಲಂಬಿಸದೆ ಸ್ವಂತ ಉದ್ದಿಮೆ ಮಾಡಿದಾಗ ಆತ್ಮಸ್ಥೆರ್ಯ ಹೆಚ್ಚಿಸಿಕೊಳ್ಳಬಹುದು. ಸಮಾಜದಲ್ಲಿ ಗೌರವ ಹಾಗೂ ಸ್ವಾವಲಂಬಿ ಬದುಕನ್ನು ಕಾಣಬಹುದು. ಇಂತಹ ತರಬೇತಿಗಳು ಬಹು ಬೇಡಿಕೆ ಇರುವ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವ ಸ್ವ ಉದ್ಯೋಗವಾಗಿದೆ ಎಂದರು. ನಂತರ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.

ಒಟ್ಟು 21 ಮಂದಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸೋಮನಾಥ್ ಕೆ., ಸಂಪನ್ಮೂಲ ವ್ಯಕ್ತಿ ತುಳಸಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕಿ ಜಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿ ಧನ್ಯವಾದ ನೀಡಿದರು.

Exit mobile version