Site icon Suddi Belthangady

ಧರ್ಮಸ್ಥಳ: ಮುಹಮ್ಮದ್ ಅಭಿಯಾನ್ ಸೌದಿಯಲ್ಲಿ ನಿಧನ

ಧರ್ಮಸ್ಥಳ; ನೇತ್ರಾವತಿ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಮತ್ತು ಮುಹ್ರೂಫಾ ದಂಪತಿಗಳ ಪುತ್ರ ಮುಹಮ್ಮದ್‌ ಅಭಿಯಾನ್ (2ವ) ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾ. 2ರಂದು ನಿಧನರಾದರು.

2 ಗಂಡು ಮತ್ತು1 ಹೆಣ್ಣು ಮಕ್ಕಳ ಪೈಕಿ ಕೊನೆಯವನಾಗಿರುವ ಮುಹಮ್ಮದ್ ಅಭಿಯಾನ್ ಅವರಿಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮತ್ತೆ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಮೃತ ಪಟ್ಟಿದೆ ಎಂದು ತಿಳಿದುಬಂದಿದೆ.

ಸೌದಿಯಲ್ಲಿಯೇ ಜೀವನ ನಡೆಸುತ್ತಿದ್ದ ಇವರ ಕುಟುಂಬ. ಮೃತ ಬಾಲಕ ತಂದೆ ತಾಯಿ ಮಾತ್ರವಲ್ಲದೆ ಅಕ್ಕಅಲೀನಾ ಫಾತಿಮಾ, ಅಣ್ಣಮುಹಮ್ಮದ್ ಅಯಾನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ಮಾ. 4ರಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನದ ಒಳಗೆ ನಡೆಯಲಿದೆ ಎಂದು ಮಗುವಿನ ದೊಡ್ಡಪ್ಪ ಅಜಿಕುರಿ ಶರೀಫ್ ಸಖಾಫಿ ತಿಳಿಸಿದ್ದಾರೆ.

Exit mobile version