Site icon Suddi Belthangady

ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ

ಧರ್ಮಸ್ಥಳ: ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ ಮಾ. 1ರಂದು ನಡೆಯಿತು. ಯಕ್ಷಗಾನ ಗುರುಗಳಾದ ಲಕ್ಷ್ಮಣ ಗೌಡ ಇವರು ಮಕ್ಕಳನ್ನು ಕುರಿತು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನೀವು ಯಾವುದೇ ಉದ್ಯೋಗವನ್ನು ಹೊಂದಿರಬಹುದು ಆದರೆ ನೀವು ಕಲಿತ ಈ ಯಕ್ಷಗಾನ ವಿದ್ಯೆಯನ್ನು ಮರೆಯಬೇಡಿ. ನೀವೆಲ್ಲರೂ ಸತ್ಪ್ರಜೆಯಾಗಿ ಬಾಳಿ ಬದುಕಿ ಎಂದು ಶುಭ ಹಾರೈಸಿದರು.

ಹಿರಿಯ ಶಿಕ್ಷಕ ಜೋಸೆಫ್ ರವರು ಮಾತನಾಡಿ ಯಕ್ಷಗಾನ ಒಂದು ವಿಶೇಷ ಕಲೆ. ಎಲ್ಲಾ ಕಲೆಗಳ ಹಿರಿಯ ಕಲೆಯಾಗಿದೆ. ವಿದ್ಯಾರ್ಥಿಗಳಾದ ನೀವು ತಂದೆ ತಾಯಿ ದೇವರನ್ನು ಪ್ರೀತಿಸಬೇಕು. ಇತರರನ್ನು ಪ್ರೀತಿಸುವ ಗುಣವನ್ನು ಹೊಂದಿರಬೇಕು ಎಂದು ಹೇಳಿದರು. ಯಕ್ಷಗಾನ ತರಗತಿಯ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಶೇಖರ್ ಗೌಡ ನಿರ್ವಹಿಸಿ ಸಂಜೀವ ಕೆ. ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು.

Exit mobile version