Site icon Suddi Belthangady

ನಗರ ಭಜನಾ ಮಂಗಳೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಕೊಯ್ಯೂರು: ಶ್ರೀ ಕೃಷ್ಣ ಭಜನಾ ಮಂಡಳಿ, ಆದೂರು ಪೆರಾಲ್, ಕೊಯ್ಯೂರು, ಹಾಗೂ ಶ್ರೀ ಕೃಷ್ಣ ಮಹಿಳಾ ಭಜನಾ ತಂಡ ಆದೂರು ಪೇರಾಲ್, ಕೊಯ್ಯೂರು ಇವುಗಳ ಜಂಟಿ ಆಶ್ರಯದಲ್ಲಿ ನಗರ ಭಜನಾ ಮoಗಳೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಾ. 1ರಂದು ನಡೆಯಿತು.

ಯುವ ಉದ್ಯಮಿಗಳಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೇರವೇರಿತು. ಭಜನಾ ಮoಗಳೋತ್ಸವದಲ್ಲಿ ವಿವಿಧ ಭಜನಾ ಮಂಡಳಿ ತಂಡಗಳು ಭಾಗವಹಿಸಿದರು.

ಭಜನಾ ಪರಿಷತ್ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲಿಯಾನ್, ಆದೂರ್ ಪೇರಾಲ್ ಶ್ರೀ ಕೃಷ್ಣಾ ಭಜನಾ ಭಜನಾ ಮಂಡಳಿ ಅಧ್ಯಕ್ಷ ರೋಹಿತಾಶ್ವ ಉಮಿಯ ದರ್ಖಾಸ್, ಭಜನಾ ತಂಡದ ಅಧ್ಯಕ್ಷೆ ಪೂರ್ಣಿಮ ಹೇಮಂತ ಜಂಕಿನಡ್ಕ ಉಪಸ್ಥಿತರಿದ್ದರು. ಪಿ. ಚಂದ್ರಶೇಖರ ಸಾಲ್ಯಾನ್ ಸ್ವಾಗತಿಸಿದರು. ಲಿಂಗಪ್ಪ ಗೌಡ ಬೆರ್ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version