ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮದ ಮೂಡಡ್ಕ ಎಂಬಲ್ಲಿ ಕರ್ನಾಟಕದ ಪ್ರಸಿದ್ದ ಉಲಮಾ ನಾಯಕರೊಬ್ಬರಾದ ಮರ್ಹೂಂ ಟಿ. ಹೆಚ್ ಉಸ್ತಾದ್ ಪ್ರಾರಂಭಿಸಿ ಕಳೆದ 19 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಯಾದ ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಮೂಡಡ್ಕ. ಪ್ರಸ್ತುತ ಸಂಸ್ಥೆಯು ಅನಾಥ ನಿರ್ಗತಿಕ ಮಂದಿರ, ಹಿಫ್ಳುಳ್ ಕುರಾನ್ ಕಾಲೇಜು, ದಅವಾ ಕಾಲೇಜು, ಶರೀಅತ್ ಕಾಲೇಜು, ಆಂಗ್ಲ ಮಾದ್ಯಮ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಾರ್ಯಾಚರಿಸುತ್ತಿದ್ದು ಒಟ್ಟು ಸಂಸ್ಥೆಯಲ್ಲಿ 1000ಕ್ಕೂ ಮಿಕ್ಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಸ್ಥೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಅಸ್ಸಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಟಿ. ಸಿ. ರಫೀಕ್ ಹಾಜಿ ಸಿಂಗಾಣಿಬೆಟ್ಟು, ಕೋಶಾಧಿಕಾರಿಯಾಗಿ ಟಿ. ಹೆಚ್. ಅತಾವುಲ್ಲಾ, ಜನರಲ್ ಮ್ಯಾನೇಜರ್ ರಾಗಿ ಕೆ. ಎ. ಅಶ್ರಫ್ ಸಖಾಫಿ ಮಾಡಾವು ಹಾಗೂ ಉಪಾಧ್ಯಕ್ಷರಾಗಿ ಎಸ್ ಉಸ್ಮಾನ್ ಹಾಜಿ , ಎಂ. ಎ. ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು, ಜೊತೆ ಕಾರ್ಯದರ್ಶಿಯಾಗಿ ಅಬೂಸ್ವಾಲಿಹ್ ಸಖಾಫಿ ಬಟ್ಲಡ್ಕ ಹಾಗೂ ಸದಸ್ಯರಾಗಿ ಹೈದರ್ ಮದನಿ ಕರಾಯ, ಅಬೂಬಕ್ಕರ್ ಮದನಿ ಬೇನಪ್ಪು, ಎಸ್. ಎಂ. ಎಸ್. ಇಬ್ರಾಹಿಂ ಮುಸ್ಲಿಯಾರ್, ಹಮೀದ್ ಮಿಸ್ಬಾಹಿ, ಟಿ. ಕೆ. ಕಾಸಿಂ ಮದನಿ ಕನರಾಜೆ, ಎಂ. ಕೆ ಆದಂ ಕಚ್ಛೇರಿ, ಅಬ್ಬಾಸ್ ಕಚ್ಛೇರಿ, ಸುಲೈ ಮಾನ್ ಮೂಡಡ್ಕ, ದಾವುದು ಉರ್ಲಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಅಲ್ ಮದೀನತುಲ್ ಮುನವ್ವರ ಎಜುಕೇಶನಲ್ ಸೆಂಟರ್ ಮೂಡಡ್ಕ ಸಂಸ್ಥೆಗೆ ಆಯ್ಕೆ
