Site icon Suddi Belthangady

ಪಡಂಗಡಿ ನಿವಾಸಿ ಪೂಜಾಶ್ರೀ ನೇಣು ಬಿಗಿದು ಆತ್ಮಹತ್ಯೆ

ಪಡಂಗಡಿ: ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ರವರ ಪತ್ನಿ ಪೂಜಾಶ್ರೀ(23) ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲಸ ಹುಡುಕುತ್ತಿದ್ದ ಪೂಜಾರನ್ನು ಪತಿ ಪ್ರಕಾಶ್ ರವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಪ್ರಕಾಶ್ ಬದ್ಯಾರು ಗ್ರಾಮದ ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಪೂಜಾ ಮೂಲತಃ ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜ ಹಾಗೂ ಸೇಸಪ್ಪ ಪೂಜಾರಿ ದಂಪತಿಯ ಪುತ್ರಿಯಾಗಿದ್ದು, 10 ತಿಂಗಳ ಹಿಂದೆ ಇವರ ವಿವಾಹವಾಗಿತ್ತು. ಪೂಜಾ ಸಾವಿನ ಬಗ್ಗೆ ಸಂಶಯವಿದೆ ಎಂದು ಹೆತ್ತವರು ಆರೋಪಿಸಿದ್ದಾರೆ. ಬೆಂಗಳೂರು ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version