Site icon Suddi Belthangady

ರಾಣಿಜರಿ ಪರಿಸರದಲ್ಲಿ ಬೆಂಕಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ರಾಣಿಜರಿ, ಬಲ್ಲಾಳರಾಯನ ದುರ್ಗ ಸಮೀಪ ಬೆಂಕಿ ಹತ್ತಿಕೊಂಡಿದೆ.

ಇಲ್ಲಿನ ಅತ್ಯಂತ ದುರ್ಗಮ ಪ್ರದೇಶ, ಕಡಿದಾದ ಕಲ್ಲುಗಳು, ಇಳಿಜಾರು ಇರುವ ಪರಿಸರದಲ್ಲಿ ಬೆಂಕಿ ಆವರಿಸಿದ್ದು ಇದನ್ನು ನಂದಿಸುವುದು ಬಹು ದೊಡ್ಡ ಸವಾಲಾಗಿದೆ. ಬೆಂಕಿ ಬಿದ್ದ ಪರಿಸರಕ್ಕೆ ಮನುಷ್ಯರು ತೆರಳಲು ಸಾಧ್ಯವಾಗದ ಸ್ಥಿತಿ ಇದೆ.

ಕಲ್ಲಿನ ಗೋಡೆಗಳ ಒಣ ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಹುಲ್ಲುಗಾವಲಿಗೆ ಆವರಿಸಿದ್ದು, ಅರಣ್ಯ ಪ್ರದೇಶದಲ್ಲಿ ಪಸರಿಸಿಲ್ಲ. ಹಾಗೂ ಬೆಂಕಿ ಹತೋಟಿಯ ಸ್ಥಿತಿಯಲ್ಲಿದೆ. ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್. ಎಫ್. ಒ ಶರ್ಮಿಷ್ಠಾ ತಿಳಿಸಿದ್ದಾರೆ.

Exit mobile version