ಬೆಳ್ತಂಗಡಿ: ತಾಲೂಕಿಗೆ ಅಪರ ಸರಕಾರಿ ವಕೀಲರಾಗಿ ನೇಮಕಗೊಂಡಿರುವ ಮನೋಹರ ಕುಮಾರ್ ಇಳಂತಿಲ ಇವರ ಕಚೇರಿಯ ತಾಲೂಕು ಪಂಚಾಯತ್ ಸಮೀಪದ ಕಟ್ಟಡದಲ್ಲಿ ಫೆ. 28ರಂದು ಉದ್ಘಾಟನೆ ಗೊಂಡಿತು.
ಕಚೇರಿಯ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೆರವೇರಿಸಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ಹೈಕೋರ್ಟ್ ವಕೀಲ ರಕ್ಷಿತ್ ಶಿವರಾಂ, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಜಿ. ಪ. ಮಾಜಿ ಜಿ. ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ಕೆಡಿಪಿ ಸದಸ್ಯ ಸಂತೋಷ ಬಿ. ಎಲ್. ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ನ್ಯಾಯವಾದಿಗಳಾದ ಬಿ.ಕೆ. ಧನಂಜಯ ರಾವ್, ಹಿರಿಯ ವಕೀಲರ ಸಂಘದ ಅಧ್ಯಕ್ಷ ಅಲೋಷಿಯಸ್ ಲೋಬೋ, ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರುಗಳಾದ ನಾಗೇಶ್ ಕುಮಾರ್ ಗೌಡ, ಸತೀಶ್ ಕಾಶಿಪಟ್ಣ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ನಿತೀಶ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ., ಮನೋಹರರವರ ತಂದೆ ಜಿನ್ನಪ್ಪ ಪೂಜಾರಿ, ಸಹೋದರ ಹರೀಶ್ ಹಾಗೂ ಇತರರು ಉಪಸ್ಥಿತರಿದ್ದರು.