Site icon Suddi Belthangady

ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಏಕಾಹ ಭಜನಾ ಕಾರ್ಯಕ್ರಮ

ಚಾರ್ಮಾಡಿ: ಫೆ. 26ರಂದು ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಭಜನಾ ಮಂಡಳಿಗಳ ಕೂಡುವಿಕೆಯಿಂದ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಏಕಾಹ ಭಜನಾ ಕಾರ್ಯಕ್ರಮ ದೇವಳದ ವಠಾರದಲ್ಲಿ ಜರುಗಿತು.

ಈ ಭಜನಾ ಕಾರ್ಯಕ್ರಮದಲ್ಲಿ ಚಾರ್ಮಾಡಿ ಶ್ರೀ ಉಳ್ಳಾಯ, ಉಳ್ಳಾಲ್ತಿ ಭಜನಾ ಮಂಡಳಿ ಬಿಟಿಗೆ, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ಭಜನಾ ಮಂಡಳಿ, ಚಾರ್ಮಾಡಿ ಶಿವ ಪಾರ್ವತಿ ಭಜನಾ ಮಂಡಳಿ, ಚಾರ್ಮಾಡಿ ಪಂಚಶ್ರೀ ಮಹಿಳಾ ಭಜನಾ ಮಂಡಳಿ, ಮುಂಡಾಜೆ ಶ್ರೀ ಭ್ರಾಮರಿ ಭಜನಾ ತಂಡ ಕಲಾಕುಂಚ ಮುಂಡಾಜೆ, ಸರ್ಪಹಿತ್ತಿಲು ಶ್ರೀ ನಾಗಬ್ರಹ್ಮ ನಾಗ ಯಕ್ಷಿಣಿ ಭಜನಾ ಮಂಡಳಿ, ಚಿಬಿದ್ರೆ ಕಲ್ಲುಗುಂಡ ಶ್ರೀ ಇಷ್ಟ ದೇವತಾ ಭಜನಾ ಮಂಡಳಿ, ಚಾರ್ಮಾಡಿ ಶಿವದುರ್ಗ ಭಜನಾ ತಂಡಗಳು ಭಾಗವಹಿಸಿದ್ದವು. ಪದಾಧಿಕಾರಿಗಳು, ಸರ್ವ ಸದಸ್ಯರು, ಸಮಸ್ತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Exit mobile version