Site icon Suddi Belthangady

ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ಮಹಾಸಭೆ – ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಶಿಶಿಲ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ NRLM ಯೋಜನೆಯ ಸೃಷ್ಟಿ ಸಂಜೀವಿನಿ ಗ್ರಾಮ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಗ್ರಾಮೀಣ ರೈತ ಸಂತೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಫೆ.25ರಂದು ಶಿಶಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಿನ್ ಕಾರ್ಯಕ್ರಮದ ಉದ್ಘಾಟನೆ ಮಾಡಿ, ಮಹಿಳೆಯರು ಸರಕಾರದ ಸವಲತ್ತುಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಕರೆ ನೀಡಿ ಪ್ರತಿ ತಿಂಗಳು ಗ್ರಾಮೀಣ ರೈತ ಸಂತೆ ನಡೆಸಲು ಪಂಚಾಯತ್ ನಿಂದ ಸರ್ವ ಸಹಕಾರ ನೀಡುವುದಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಗಿರಿಜಾ ಎಸ್. ಮಾತನಾಡಿ ಒಕ್ಕೂಟವು ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸರ್ವರ ಸಹಕಾರ ಕೇಳಿದರು.

ತಾಲೂಕು ವ್ಯವಸ್ಥಾಪಕರಾದ ನಿತೇಶ್ NRLM ಯೋಜನೆಯ ಸವಿವರ ಮಾಹಿತಿಯನ್ನು ನೀಡಿದರು. ವಲಯ ಮೇಲ್ವಿಚಾರಕಿ ವೀಣಾಶ್ರೀ ಸಂಜೀವಿನಿ ಕಾರ್ಯಕ್ರಮ, ಒಕ್ಕೂಟದ ಬಗ್ಗೆ ಮಾಹಿತಿಯನ್ನು ನೀಡಿದರು. ಬಳಿಕ ನೂತನ ಪದಾಧಿಕಾರಿಗಳ ತಂಡಕ್ಕೆ ನಿರ್ಣಯ ಪುಸ್ತಕ ಹಸ್ತಾಂತರಿಸಲಾಯಿತು. ಸದಸ್ಯರು ತಯಾರಿಸಿದ ಉತ್ಪನ್ನಗಳಾದ ಸೋಪು ಹಾಗೂ ಉಪ್ಪಿನಕಾಯಿಗಳನ್ನು ಬಿಡುಗಡೆಗೊಳಿಸಿ ಸ್ವ ಉದ್ಯೋಗ ಕೈಗೊಂಡಿರುವ ವಿಶಾಲಾಕ್ಷಿಯವರನ್ನು ಸನ್ಮಾನಿಸಲಾಯಿತು‌.

ಪೂರ್ವಾಧ್ಯಕ್ಷ ಗಿರಿಜಾ ಹಾಗೂ ಪದಾಧಿಕಾರಿಗಳು ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದ ಭಾಗೀರಥಿಯವರನ್ನು ಸನ್ಮಾನಿಸಲಾಯಿತು. ಬಳಿಕ ಗ್ರಾಮೀಣ ರೈತ ಸಂತೆ ಕಾರ್ಯಕ್ರಮ ನಡೆಯಿತು. ಕೃಷಿ ಸಖಿ ಸುಮಾ ಸಂಜಯ್ ಸ್ವಾಗತಿಸಿದರು.
ಸದಸ್ಯರಿಂದ ಪ್ರಾರ್ಥನೆ ನಡೆಯಿತು. MBK ಶಾರದಾ ಧನ್ಯವಾದಗೈದರು. LCRP ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version