ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆ ಈ ಶಾಲೆಯ ಮುಕುಟಕ್ಕೆ ಮತ್ತೊಂದು ಗರಿ ಸರ್ವದಾನಿಗಳಿಂದ ಮತ್ತು ಸಹಕಾರದಿಂದ ಈ ಶಾಲೆಯ ಪ್ರವೇಶ ದ್ವಾರವು ಅತ್ಯಂತ ಅಚ್ಚುಕಟ್ಟಾಗಿ 25 ದಿವಸ ಒಳಗೆ ಪೂರ್ಣಗೊಳಿಸಿ ಫೆ. 27ರಂದು ಉದ್ಘಾಟನೆಗೊಂಡಿತು.
ಸರಿಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೆಲಸ ಉದಾರ ದಾನಿಗಳಿಂದ ನೆರವೇರಿತು. ಅತ್ಯಂತ ಸುಂದರವಾದ ಮತ್ತು ಮಕ್ಕಳಿಗೂ ಒಂದು ಸ್ವಾಗತಿಸುವ ಈ ದ್ವಾರವು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಶಾಲೆ ಎಂದರೆ ಮೂಗುಮುರಿಯುವ ಜನರ ಮಧ್ಯೆಯು ಇಂಥ ಶಾಲೆ ಇರುವುದು ಒಂದು ಅಭಿನಂದನೆಗೆ ಪಾತ್ರವಾಗಿದೆ.
ಪಂಚಾಯತ್ ಅಧ್ಯಕ್ಷ ಉಸ್ಮಾನ್ ರವರು ಆಗಮಿಸಿದ್ದರು. ಬಾರ್ಯ ಪಂಚಾಯತಿನ ಸದಸ್ಯ ಬಾಲಕೃಷ್ಣ ಶೆಟ್ಟಿ ಎಂ., ಎಸ್. ಡಿ. ಎಮ್. ಸಿ ಅಧ್ಯಕ್ಷ ದಯಾನಂದ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಉಪಾಧ್ಯಕ್ಷ ಇನಾಸ್ ರೋಡ್ರಿಗಸ್ ಹಾಗೂ ದಾನಿಗಳು ಉಪಸ್ಥಿತರಿದ್ದರು. ಶಿಕ್ಷಕ ಅಭಿಷೇಕ್ ಸ್ವಾಗತಿಸಿ, ಸುನಿಲ್ ವಂದಿಸಿದರು.