ಬೆಳ್ತಂಗಡಿ: ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಸಹಕಾರ ಭಾರತೀಯ ಎಲ್ಲಾ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಲಿಂಗಪ್ಪ ನಾಯ್ಕ ಉರುವಾಲು, ಉಪಾಧ್ಯಕ್ಷರಾಗಿ ಲಲಿತ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಸಾಮಾನ್ಯ ಕ್ಷೇತ್ರದ ಡಾಕಯ್ಯ ಮಲೆಕುಡಿಯ, ಪ್ರಶಾಂತ್ ಎ.ಜೆ., ತಾರನಾಥ, ಲೀಲಾವತಿ, ಪ್ರಸಾದ್, ರಾಮಣ್ಣ ನಾಯ್ಕ, ಚೆನ್ನಪ್ಪ, ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ, ಯಶೋಧ ಇವರುಗಳು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಬಿ.ವಿ. ಪ್ರತಿಮಾ ಕಾರ್ಯ ನಿರ್ವಹಿಸಿದ್ದರು. ಪ್ರಭಾರಿ ಸೀತಾರಾಮ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.