Site icon Suddi Belthangady

ಮಾಲಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ – ಪುಂಜಾಲಕಟ್ಟೆ – ಪುರಿಯ ರಸ್ತೆ, ಊರ್ಲ ರಸ್ತೆ ರಿಪೇರಿ ಮಾಡುವಂತೆ ಒತ್ತಾಯ

ಮಾಲಾಡಿ: ಕಳೆದ ಒಂದೂವರೆ ವರ್ಷದಿಂದ ಪುರಿಯ ರಸ್ತೆ, ಊರ್ಲಾ ರಸ್ತೆ ಅಗೆದು ಆಕಲಾಗಿದೆ. ಇದುವರೆಗೆ ರಸ್ತೆ ಕಾಮಗಾರಿಗೆ ಪೂರ್ಣಗೊಳಿಸಿಲ್ಲ. ಜಲ್ಲಿ ಹಾಕಿದ್ದರಿಂದ ವಾಹನ ಚಲಿಸಲು ನಡೆದಾಡಲು ಸಾಧ್ಯ ವಿಲ್ಲದೇ ಪರದಾಡುವ ಸಮಸ್ಯೆಗಳು ಎದುರಾಗಿದೆ. ಗುತ್ತಿಗೆದಾರರು ಎಲ್ಲಿ ಕಾಣೆಯಾಗಿದ್ದಾರೆ ಎಂದು ಮಾಲಾಡಿ ಗ್ರಾಮ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯಿತು.

ಮಾಲಾಡಿ ಗ್ರಾಮ ಪಂಚಾಯತ್ ನ 2024-2 5ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಫೆ. 27ರಂದು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ನೋಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ಸಾಮಾಜಿಕ ಅರಣ್ಯ ಇಲಾಖೆಯ ಲೋಕೇಶ್ ಭಾಗವಹಿಸಿ ಸಭೆಯನ್ನು ಮುನ್ನಡೆಸಿದರು. ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ರಾಜಶೇಖರ್ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಸದಸ್ಯರುಗಳಾದ ಸುಸ್ಸಾನ ಡಿಸೋಜಾ, ದಿನೇಶ್ ಕರ್ಕೇರಾ, ಎಸ್. ಬೇಬಿ ಸುವರ್ಣಾ, ಸುಧಾಕರ ಆಳ್ವ, ಜಯಂತಿ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ತುಳಸಿ ಬಿ., ರಾಜೇಶ್, ಐರಿನ್ ಮೊರಾಸ್, ಫಾರ್ಝನ, ವಿದ್ಯಾ ಪಿ. ಸಾಲಿಯಾನ್, ರುಬೀನಾ, ಗುಲಾಬಿ, ದಿನೇಶ್, ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು. ಅಂಗನವಾಡಿ ಆಶಾ ಕಾರ್ಯರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version