Site icon Suddi Belthangady

ಕಳೆಂಜ: ಸದಾಶಿವೇಶ್ವರ ದೇವಳದ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ್ ರಾವ್ ಕಾಯಡ – ಕಾರ್ಯದರ್ಶಿಯಾಗಿ ಕುಸುಮಾಕರ ಕೊತ್ತೋಡಿ 3ನೇ ಬಾರಿ ಆಯ್ಕೆ

ಕಳೆಂಜ: ಗ್ರಾಮದ ಸದಾಶಿವೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ಆಯ್ಕೆಗೆ ಫೆ. 26ರಂದು ದೇವಳದಲ್ಲಿ ಸಭೆ ನಡೆದಿದ್ದು, ಕಳೆದ 2 ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಕೆ. ಶ್ರೀಧರ್ ರಾವ್, ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದು ಕಾರ್ಯದರ್ಶಿಯಾಗಿದ್ದ ಕುಸುಮಾಕರ ಕೊತ್ತೋಡಿ ಪುನರ್ ಆಯ್ಕೆಗೊಂಡಿದ್ದಾರೆ.

ಕೋಶಧಿಕಾರಿಯಾಗಿ ನಿರಂಜನ್ ಬಂದಿಮಾರು, ಉಪಾಧ್ಯಕ್ಷರಾಗಿ ಅಶೋಕ್ ಭಟ್ ಕಾಯಡ ಮತ್ತು ಬಾಲಕೃಷ್ಣ ಬರಮೇಲು, ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಕೇದಗೆದಡಿ, ಮತ್ತು ಲೋಕಯ್ಯ ಗೌಡ ಆಯ್ಕೆ ಗೊಂಡಿದ್ದು ಸದಸ್ಯರಾಗಿ ವೆಂಕಪ್ಪ ಗೌಡ, ಕೇಶವ ಗೌಡ ಮಲ್ಲ ಜಾಲು, ಕೇಶವ ಬರಮೇಲು, ರಮನಾಥ ರೈ, ಸಂಜೀವ ಪುಳ್ಳಯ,ಗಣೇಶ್ ಬದಿಮಾರು, ಶೀನಪ್ಪ ಗೌಡ ಕೊತ್ತೋಡಿ, ವಸಂತ ಪೂಜಾರಿ, ಜಯಚಂದ್ರ ಸುಂದರ ಗೌಡ ಕುದ್ದ ಆಯ್ಕೆಯಾಗಿದ್ದು. ಗೌರವ ಸಲಹೆಗರರಾಗಿ ರಮೇಶ್ ರಾವ್ ಕಾಯಡ, ಲಕ್ಷ್ಮಣ ಗೌಡ ಬಲ್ಕಾಜೆ, ದಾಮೋದರ ಶೆಟ್ಟಿ ಕಾಂತ್ರೆಲ್, ಕೇಶವ ಕಳ್ಳದoಬೆ, ಮನೋಹರ ಖರೆ, ಅರವಿಂದ ಕುಡ್ವ ನೇಮಕಗೊಂಡಿದ್ದಾರೆ.

Exit mobile version