Site icon Suddi Belthangady

ಸಾವ್ಯ: ಮರದಿಂದ ಬಿದ್ದು ಮುತ್ತಯ್ಯ ಪೂಜಾರಿ ಮೃತ್ಯು

ಬೆಳ್ತಂಗಡಿ: ಸಾವ್ಯ ಗ್ರಾಮದ ಕರ್ಪ್ರೊಟ್ಟು ನಿವಾಸಿ ಮುತ್ತಯ್ಯ ಪೂಜಾರಿ (67) ಮರದಿಂದ ಬಿದ್ದು ಮೃತಪಟ್ಟ ಘಟನೆ ಫೆ. 26ರಂದು ನಡೆದಿದೆ.

ಶೇಂದಿ ತೆಗೆಯಲು ಮರಕ್ಕೆ ಹತ್ತುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಇವರನ್ನು ತಕ್ಷಣ ಮೂಡುಬಿದಿರೆ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಮಕ್ಕಳಾದ ವಿಶ್ವನಾಥ, ನವೀನ, ಸಂತೋಷ ಮತ್ತು ನವಿತಾ ಅವರನ್ನು ಅಗಲಿದ್ದಾರೆ.

Exit mobile version