ಬಳಂಜ: ಕೇರಳದಲ್ಲಿ ಹಿಂದೆ ಶೋಶಿತರ ದಬ್ಬಾಳಿಕೆ, ಮತಾಂತರ ನಡೆಯುತ್ತಿದ್ದು ಇದನ್ನು ತಡೆದ ನಾರಾಯಣ ಗುರುಗಳು ಕೆಳಜಾತಿಯವರಿಗೆ ಶಿವನ ಪೂಜೆ ಅವಕಾಶ ಇಲ್ಲದ ಸಮಯ ಶಿವನನ್ನು ಸ್ಥಾಪಿಸುವ ಮೂಲಕ ಜನಸಾಮಾನ್ಯರಿಗೆ ಶಿವನ ಪೂಜೆಯ ಅವಕಾಶ ಕಲ್ಪಿಸಿದರು.
ಒಂದೇ ಜಾತಿ, ಒಂದೇ ದರ್ಮ, ಒಂದೇ ಮತ ಎಂದು ಸಾರಿದ ಗುರುಗಳ ಆದರ್ಶಗಳನ್ನು ಬಳಂಜ ಬಿಲ್ಲವ ಸಂಘ ಎಲ್ಲಾ ಸಮಾಜವನ್ನು ಒಟ್ಟು ಸೇರಿಸಿ ಗುರುಪೂಜೆ ಮಾಡುವ ಮೂಲಕ ಅವರ ಆದರ್ಶಗಳನ್ನು ಪಾಲಿಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.
ಅವರು ಫೆ. 26ರಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ, ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು, ಇದರ ಸಹಯೋಗದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರುಪೂಜೆ, ಶ್ರೀ ಸರ್ವೇಶ್ವರೀ ಪೂಜೆ, ಧಾರ್ಮಿಕ ಸಭೆ ಹಾಗೂ ರಾಜ್ಯೋತ್ಸವ ಪ್ರಶಸ್ತಿಯ ಅಭಿನಂದನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಯೋದ್ಯೆ ನಿರ್ಮಾಣ, ಮಹಾನ್ ಕುಂಬಮೇಳ ನಡೆಸುವ ಮೂಲಕ ಭಾರತದ ಹಿಂದೂ ದರ್ಮದ ಶಕ್ತಿ ಎಷ್ಡಿದೆ ಎಂದು ಜಗತ್ತಿಗೆ ತೋರಿಸಿದೆ ಎಂದರು.
ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅದ್ಯಯನ ಕೇಂದ್ರ ಸಂಚಯನಗಿರಿ ಇದರ ಅದ್ಯಕ್ಷ ಡಾ. ತುಕಾರಾಂ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಇಂದಿನ ಮಕ್ಕಳಿಗೆ ಹಿಂದಿನ ಜೀವನ ಪದ್ದತಿ, ಶಿಕ್ಷಣ ಪದ್ದತಿ ತಿಳಿಸುವ ಅಗತ್ಯವಿದೆ. ಜೊತೆಗೆ ಗುರು ಪೂಜೆ ಮಾಡುವ ಜೊತೆ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ತಿಳಿಸಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು.
ಸಂಘ ಸಂಸ್ಥೆಗಳು ದಾರ್ಮಿಕತೆಗೆ ಆದ್ಯತೆ ನೀಡುವ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದರು. ಇಂದು ಬಳಂಜ ಬಿಲ್ಲವ ಸಂಘವು ನಾರಾಯಣ ಗುರುಗಳ ತತ್ವಗಳನ್ನು ಪಾಲಿಸುತ್ತಿರುವ ಕಾರಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅದ್ಯಕ್ಷ ಸತೀಶ್ ಕಾಶಿಪಟ್ನ, ಶ್ರಿ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅದ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಹಾಯಕ ಅಭಿಯಂತರ ಗುರುಪ್ರಸಾದ್ ಎಂ,, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅದ್ಯಕ್ಷ ಜಯವಿಕ್ರಮ್ ಕಲ್ಲಾಪು, ಶುಭಹಾರೈಸಿದರು. ಸಂಘದ ಅದ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಅದ್ಯಕ್ಷತೆ ವಹಿಸಿದ್ದರು. ಬಳಂಜ ಗ್ರಾ. ಪಂ. ಅದ್ಯಕ್ಷೆ ಶೋಭಾ ಕುಲಾಲ್, ಸಂಘದ ಗೌರವ ಅದ್ಯಕ್ಷ ಹೆಚ್.ದರ್ಣಪ್ಪ ಪೂಜಾರಿ, ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್, ಮಹಿಳಾ ಬಿಲ್ಲವ ವೇದಿಕೆಯ ಅದ್ಯಕ್ಷೆ ಭಾರತಿ ಸಂತೋಷ್, ಯುವ ಬಿಲ್ಲವ ವೇದಿಕೆಯ ಅದ್ಯಕ್ಷ ಶರತ್ ಅಂಚನ್, ಸಂಘದ ಪ್ರ. ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಗೆ ಅಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು, ಗೆಜ್ಹೆಗಿರಿ ಕ್ಷೇತ್ರದ ಅಧ್ಯಕ್ಷರಾಗಿ ಆಯ್ಕೆಯಾದ ರವಿ ಪುಜಾರಿ ಚಿಲಿಂಬಿ, ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ದಿಯಾ ಎಂ. ಕೋಟ್ಯಾನ್ ಸುವರ್ಣ ನಿಲಯ ಬಳಂಜ ಇವರನ್ನು ಸಂಘದ ವತಿಯಿಂದ ಅಭಿ ನಂದಿಸಲಾಯಿತು.
ಸಂತೋಷ್ ಪಿ. ಕೋಟ್ಯಾನ್ ಸ್ವಾಗತಿಸಿ, ಚಂದ್ರಹಾಸ ಬಳಂಜ, ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.