Site icon Suddi Belthangady

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆಯ ಬಗ್ಗೆ ಸಮಾಲೋಚನಾ ಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಫೆ. 28ರಂದು ಸಮರ್ಪಣೆ ಯಾಗಲಿರುವ ಹೊರೆಕಾಣಿಕೆಯ ಬಗ್ಗೆ ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳ ಸಮಲೋಚನಾ ಸಭೆಯನ್ನು ಫೆ. 26ರಂದು ಬೆಳಿಗ್ಗೆ 10.30 ಕ್ಕೆ ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇಲ್ಲಿ ನಡೆಸಲಾಯಿತು.

ಈ ಸಮಾಲೋಚನಾ ಸಭೆಯಲ್ಲಿ ಫೆ. 28ರಂದು ಶ್ರೀ ಕ್ಷೇತ್ರ ಗೆಜ್ಜಗಿರಿಗೆ ಹೊರ ಕಾಣಿಕೆಯನ್ನು ಬೆಳ್ತಂಗಡಿ ತಾಲೂಕಿನ 7 ಜಿಲ್ಲಾ ಪಂಚಾಯತ್ ಹಾಗೂ ಬೆಳ್ತಂಗಡಿ ನಗರ ವ್ಯಾಪ್ತಿಯಿಂದ ಹೊರಕಾಣಿಕೆಯನ್ನು ಸಮರ್ಪಿಸುವ ಬಗ್ಗೆ ಚರ್ಚಿಸಲಾಯಿತು.

ಪ್ರತಿ ಕ್ಷೇತ್ರದಿಂದ 2 ವಾಹನದಲ್ಲಿ ಹೊರೆಕಾಣಿಕೆಯೊಂದಿಗೆ ಹೊರಟು ಪುತ್ತೂರಿನಲ್ಲಿ 1 ಗಂಟೆಗೆ ಸೇರಿ ಅಲ್ಲಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭವ್ಯ ಮೆರವಣಿಗೆಯೊಂದಿಗೆ ತೆರಳುವುದೆಂದು ನಿರ್ಧರಿಸಲಾಯಿತು.
ಈ ಸಮಾಲೋಚನಾ ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷರು, ನಿಕಟಪೂರ್ವ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರು ಆಗಿರುವ ಬಿ. ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯ ಜಯಂತ ಕೋಟ್ಯಾನ್ ಮರೋಡಿ, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷ ಜಯರಾಮ ಬಂಗೇರ ಹೆರಾಜೇ, ಬೆಳ್ತಂಗಡಿ ನಗರ ಸಂಚಾಲಕ ಕರುಣಾಕರ, ಲಾಯಿಲ ವಲಯ ಸಂಚಾಲಕ ಸೌಮ್ಯ, ಕುವೆಟ್ಟು ವಲಯ ಸಂಚಾಲಕ ಶಾಂತ ಕುವೆಟ್ಟು, ಪ್ರಮೋದ್ ಮಚ್ಚಿನ, ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ಮಾಜಿ ಸದಸ್ಯರಾಗಿರುವ ಮಂಜುನಾಥ್ ಸಾಲಿಯನ್, ಕಣಿಯೂರು ವಲಯ ಸಂಚಾಲಕ ಉಷಾ ಶರತ್, ಅಳದಂಗಡಿ ವಲಯ ಸಂಚಾಲಕ ಮಧುರ ರಾಘವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರ್ಲಾಲು ಇದರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಪ್ರಶಾಂತ್ ಪಾರೆಂಕಿ, ನಾರಾವಿ ವಲಯ ಸಂಚಾಲಕ ಯಶೋಧರ ಮರೋಡಿ, ಸುಲ್ಕೇರಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಶುಭಕರ ಕುದ್ಯಾಡಿ, ಮಾಲಾಡಿ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ದಿನೇಶ್ ಡಿ. ಕರ್ಕೇರ, ಗುರುನಾರಾಯಣ ಸೇವಾ ಸಂಘ ಮಡಂತ್ಯಾರ್ ಇಲ್ಲಿನ ಅಧ್ಯಕ್ಷ ವೆಂಕಪ್ಪ ಕೋಡ್ಲಕ್ಕೆ, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕ ಹರಿದಾಸ್ ಕೇದೆ ಮುಂತಾದವರು ಭಾಗವಹಿಸಿದ್ದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಕಾರ್ಯಕ್ರಮವನ್ನು ಸಂಘಟಿಸಿ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Exit mobile version