Site icon Suddi Belthangady

ನಿಡ್ಲೆ ಗ್ರಾ. ಪಂ. ನ ವಿಕಲಚೇತನರ ಗ್ರಾಮ ಸಭೆ

ನಿಡ್ಲೆ: ಗ್ರಾಮ ಪಂಚಾಯತಿನ ವಿಕಲಚೇತನರ ಗ್ರಾಮ ಸಭೆಯು ಫೆ. 24ರಂದು ಗ್ರಾ. ಪಂ. ನ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿನ ಅಧ್ಯಕ್ಷೆ ಶ್ಯಾಮಲಾ ವಹಿಸಿಕೊಂಡಿದ್ದರು.

ಸಭೆಯಲ್ಲಿ ತಾಲೂಕು ಪಂಚಾಯತ್ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಜಾನ್ ಬ್ಯಾಕ್ಟೀಸ್ಟ್ ಡಿಸೋಜಾ ಇವರು ಸರ್ಕಾರದಿಂದ ಸಿಗುವ ಹಲವು ಯೋಜನೆಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿಯನ್ನು ನೀಡಿರುತ್ತಾರೆ. ಸಭೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಹೇಮಲತಾ ವಾರ್ಷಿಕ ವರದಿಯನ್ನು ಓದಿದರು. ಹಾಗೂ ಅನುಮೋದನೆಯನ್ನು ಪಡೆಯಲಾಯಿತು.

ಆರೋಗ್ಯದ ಬಗ್ಗೆ ಸಿ.ಎಚ್.ಒ ವಿನುತ ಮಾಹಿತಿ ನೀಡಿದರು. 2 ಜನ ವಿಕಲಚೇತನರಿಗೆ ವೈದ್ಯಕೀಯ ಸಹಾಯಧನದ ಚೆಕ್ಕನ್ನು ನೀಡಲಾಯಿತು. ಪಂಚಾಯತಿಯಿಂದ ಸಿಗುವ 5/% ಅನುದಾನದ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಇವರು ಮಾಹಿತಿಯನ್ನು ನೀಡಿದರು.

ಸಭೆಯ ಕೊನೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ, ಪಂಚಾಯತ್ ಅಧ್ಯಕ್ಷರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಅಂತಿಮವಾಗಿ ಧನ್ಯವಾದಗಳು, ನೀಡುವ ಮೂಲಕ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Exit mobile version