ಬೆಳ್ತಂಗಡಿ: ಲಾಯಿಲ ಗ್ರಾಮದ ಟಿ.ಬಿ ಕ್ರಾಸ್-ಕುತ್ರೋಟ್ಟು ರಸ್ತೆ ಕಳಪೆ ಕಾಮಗಾರಿ ವಿರುದ್ಧ ಎಸ್.ಡಿ.ಪಿ.ಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ರಫೀಕ್ ಕುಂಟಿನಿ ನೇತೃತ್ವದಲ್ಲಿ ಫೆ. 24ರಂದು ಪ್ರತಿಭಟನೆ ನಡೆಯಿತು.
ಉಜಿರೆ ಬ್ಲಾಕ್ ಸಮಿತಿ ಸದಸ್ಯ ಆರೀಫ್ ಕುಂಟಿನಿ ಪ್ರತಿಭಟನಾ ಉದ್ದೇಶಿಸಿ ಮಾತನಾಡಿದರು. ರಸ್ತೆ ಕಳಪೆ ಕಾಮಗಾರಿ ನಡೆದ ಸ್ಥಳಕ್ಕೆ ಲಾಯಿಲ ಗ್ರಾಮ ಪಂಚಾಯತ್ ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯ ಸಲೀಂ ಕುಂಟಿನಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಕ್ಕಪ್ಪ ಹೆಚ್ (ಬಿ. ಇ) ಅವರೊಂದಿಗೆ ಪ್ರತಿಭಟನಾಕಾರರು ಆಗಮಿಸಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಅಧಿಕಾರಿಯ ಆದೇಶಿಸಿದರು.
ಸಮರ್ಪಕವಾಗಿ ರಸ್ತೆ ಕಾಮಗಾರಿಯನ್ನು ಮಾಡಿಕೊಡುವಂತೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಕ್ಕಪ್ಪ ಹೆಚ್ (ಬಿ. ಇ) ಅವರಿಗೆ ಮನವಿ ನೀಡಲಾಯಿತು. ಎಸ್.ಡಿ.ಪಿ.ಐ ಉಜಿರೆ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಅಲಿ ಉಜಿರೆ, ಫಝಲ್ ಉಜಿರೆ, ಸಹಲ್ ನಿರ್ಸಾಲ್, ಮರ್ಷಾ ಉಜಿರೆ, ಸಲೀಂ ಉಜಿರೆ, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.