Site icon Suddi Belthangady

ಕಾರ್ ಡ್ರಾ ಕೂಪನ್ ಗೆದ್ದ ಶಿರ್ಲಾಲಿನ ಪ್ರಿಯಾಂಕರಿಗೆ ಸೆಲೆರಿಯೋ ಕಾರಿನ ಕೀ ಹಸ್ತಾಂತರ

ಬೆಳ್ತಂಗಡಿ: ಕಳೆದ 16 ವರ್ಷಗಳಿಂದ ಪರಿಶುದ್ಧ ಆಭರಣವನ್ನು ನೀಡುವ ಮೂಲಕ ಗ್ರಾಹಕರ ಮನ ಗೆದ್ದ ಮುಳಿಯ ಜುವೆಲ್ಲರಿಯಲ್ಲಿ ಫೆ. 24ರಂದು ಡೈಮಂಡ್ ಫೆಸ್ಟ್‌ ನ ಕಾರ್‌ ಡ್ರಾ ಕೂಪನ್‌ ಚೀಟಿ ಎತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಇನ್‌ ವಾಯ್ಸ್‌ ಸಂಖ್ಯೆ 4265ರ ಕೂಪನ್‌ ಸಂಖ್ಯೆ 00172ರ, ಶಿರ್ಲಾಲಿನ ಪ್ರಿಯಾಂಕ ಸೆಲೆರಿಯೋ ಕಾರು ಗೆದ್ದ ಅದೃಷ್ಟಶಾಲಿಯಾಗಿದ್ದರು. ಡೈಮಂಡ್ ಫೆಸ್ಟ್‌ ನ, ಕಾರ್ ಡ್ರಾ ವಿಜೇತರಾದ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ನಿಸರ್ಗ ಮನೆಯ ಪ್ರಿಯಾಂಕ ಅವರ ತಾಯಿ ಆಶಾ ಹಾಗೂ ತಂದೆ ಪ್ರಭಾಕರ್ ಇವರಿಗೆ ಕಾರ್ ಕೀ ಯನ್ನು ಹಸ್ತಾoತರಿಸಲಾಯಿತು.

ಮುಳಿಯ ಜುವೆಲ್ಲರಿಯ ಬೆಳ್ತಂಗಡಿ ಶಾಖೆಯಲ್ಲಿ ಅಗಸ್ಟ್ 15 , 2024 ರಿಂದ ನ.‌30, 2024ರ ಒಳಗಡೆ ಡೈಮಂಡ್‌ ಫೆಸ್ಟ್‌ನಲ್ಲಿ 20 ಸಾವಿರ ರೂಪಾಯಿಗಿಂತ ಮೇಲ್ಪಟ್ಟು ವಜ್ರ ಖರೀದಿ ಮಾಡಿದವರಿಗೆ ಸೆಲೆರಿಯೋ ಕಾರ್‌ ಗೆಲ್ಲುವ ಲಕ್ಕಿ ಕೂಪನ್‌ ನೀಡಲಾಗಿತ್ತು.

ಇದರಲ್ಲಿ ಒಟ್ಟು 235 ರಷ್ಟು ಕೂಪನ್‌ಗಳು ಬಂದಿದ್ದು ಕಾರ್‌ ಡ್ರಾ ಕಾರ್ಯಕ್ರಮವನ್ನು ಫೆ 24 ರಂದು ಸಂಜೆ 4 ಗಂಟೆಗೆ ಮುಳಿಯ ಆಭರಣ ಮಳಿಗೆಯಲ್ಲಿ ಆಯೋಜನೆ ಮಾಡಲಾಗಿತ್ತು.

Exit mobile version