ಮುಂಡಾಜೆ: ನ್ಯಾಷನಲ್ ಯೂತ್ ಕಾಂಪ್ಲೆಕ್ಸ್ ಗಡ್ ಪುರಿ ಹರಿಯಾಣದಲ್ಲಿ ಫೆ. 19ರಿಂದ 22ರವರೆಗೆ ನಡೆದ ರಾಷ್ಟ್ರ ಮಟ್ಟದ ಗೋಲ್ಡನ್ ಆರೋ ರಾಲಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಮುಂಡಾಜೆ ಹಿ. ಪ್ರಾ. ಶಾಲಾ ವಿದ್ಯಾರ್ಥಿನಿ ದ್ವಿಷಾ ಯು. ಡಿ. ಫೆ. 23ರಂದು ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಬುಲ್ ಬುಲ್ ನ ಅತ್ಯುನ್ನತ ಪ್ರಶಸ್ತಿಯಾದ ಗೋಲ್ಡನ್ ಆರೋ (Golden Arrow ) ಪ್ರಶಸ್ತಿಯನ್ನು ನ್ಯಾಷನಲ್ ಕಮಿಷನರ್ ಕೆ.ಕೆ. ಕಾಂಡೆಲ್ವಾಲ್ ಹಾಗೂ ಪ್ರೆಸಿಡೆಂಟ್ ಅನಿಲ್ ಕುಮಾರ್ ಜೈನ್ ಅವರಿಂದ ಪಡೆದುಕೊಂಡಿರುತ್ತಾರೆ. ದ್ವಿಷಾ ಇವರು ಮುಂಡಾಜೆ ಗ್ರಾಮದ ದಿನೇಶ್ ಮತ್ತು ಉಷಾರವರ ಪುತ್ರಿ ಇವರಿಗೆ ಸ. ಹಿ. ಪ್ರಾ. ಶಾಲೆ ಮುಂಡತೋಡಿಯ ಶಿಕ್ಷಕಿ ಸೇವಂತಿ ಬಿ. (Pre. ALT. Bulbul) ಮಾರ್ಗದರ್ಶನ ನೀಡಿರುತ್ತಾರೆ.
ಮುಂಡಾಜೆ ಹಿ. ಪ್ರಾ. ಶಾಲಾ ವಿದ್ಯಾರ್ಥಿನಿ ದ್ವಿಷಾ ಯು.ಡಿ. ಗೆ ರಾಷ್ಟ್ರ ಮಟ್ಟದ Golden Arrow ಪ್ರಶಸ್ತಿ
