Site icon Suddi Belthangady

ಪಾದಯಾತ್ರಿಗಳಿಗೆ ಕ್ರಿಶ್ಚಿಯನ್ ಯೂನಿಯನ್ ಕೊಕ್ಕಡ ಇದರ ವತಿಯಿಂದ ಕಲ್ಲಂಗಡಿ ಹಣ್ಣು-ಜ್ಯೂಸ್ ವಿತರಣೆ

ಕೊಕ್ಕಡ: ಫೆ. 24ರಂದು ಶಿವರಾತ್ರಿಯ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಕ್ರಿಶ್ಚಿಯನ್ ಯೂನಿಯನ್ ಕೊಕ್ಕಡ ಇದರ ವತಿಯಿಂದ ಕೊಕ್ಕಡ ಚರ್ಚಿನ ಮುಂದೆ ಸುಮಾರು 600 ಕೆ. ಜಿ. ಕಲ್ಲಂಗಡಿ ಹಣ್ಣು ಮತ್ತು ಜ್ಯೂಸ್ ನ್ನು ವಿತರಿಸಲಾಯಿತು.

ಈ ಕಾರ್ಯಕ್ಕೆ ಅನೇಕ ಸಹೃದಯಿ ದಾನಿಗಳು ಕಲ್ಲಂಗಡಿ ಹಣ್ಣು ಮತ್ತು ಇತರ ವಸ್ತುಗಳನ್ನು ದಾನರೂಪದಲ್ಲಿ ನೀಡಿ ಸಹಕರಿಸಿದ್ದಾರೆ. ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸ್ಥಳದಲ್ಲಿ ಹಾಜರಿದ್ದು ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿದರು. ಪಾದಯಾತ್ರಿಗಳ ದಾಹ ತಣಿಸುವ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Exit mobile version