Site icon Suddi Belthangady

ಕರಂಬಾರು ವಿದ್ಯುತ್ ಅವಘಡ

ಕರಂಬಾರು: ಗ್ರಾಮದ ಬಂತ್ತಡ್ಕದಲ್ಲಿ ವಿದ್ಯುತ್ ಲೈನ್ ಗಳಿಂದ ಬೆಂಕಿ ಉತ್ಪತ್ತಿಯಾಗಿ ಬೆಂಕಿ ಬಿದ್ದು ಐದಾರು ಎಕ್ರೆಯಲ್ಲಿರುವ ಗೇರು ಹಾಗೂ ಇತರ ಮರಗಳು ಸುಟ್ಟು ಹೋಗಿದೆ.

ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ಇಲ್ಲಿಯ ಸ್ಥಳೀಯರು ಮತ್ತು ಮೆಸ್ಕಾಂ ಪವರ್ ಮ್ಯಾನ್ ಶಿವಾನಂದ ದಲಿತ ಮುಖಂಡ ಅಣ್ಣು ಯಸ್, ಶಿರ್ಲಾಲು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ ಕೆ, ಕರಂಬಾರು ಶಾಲೆಯ ಬಿಸಿ ಊಟ ನೌಕರಾದ ಚಂದ್ರಾವತಿ ಹಾಗೂ ಇತರ ಸಹಕಾರದಲ್ಲಿ ಬೆಂಕಿಯನ್ನು ನಂದಿಸಲು ಸಹಕಾರಿಸಿದ್ದು, ಈ ಭಾಗದಲ್ಲಿ ಪ್ರತಿ ವರ್ಷ ಈ ವಿದ್ಯುತ್ ಲೈನ್ ಬೆಂಕಿ ಬೀಳುತ್ತದೆ

ಈ ವಿಚಾರವನ್ನು ಕೆಲವು ಗ್ರಾಮ ಸಭೆಗಳಲ್ಲಿ ಮತ್ತು ದಲಿತರ ಕುಂದು ಕೊರೆತೆ ಸಭೆಗಳಲ್ಲಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದು ಯಾವುದೇ ಪ್ರಯೋಜನವಾಗಿಲ್ಲ.

Exit mobile version