ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಾರ್ಮಾಡಿ ಗ್ರಾಮ ಸಮಿತಿಯ ನೂತನ ಕಚೇರಿಯ ಉದ್ಘಾಟನೆ ಮತ್ತು ಸಾರ್ವಜನಿಕ ಸಭೆ ರಹೀಮ್ ಬೀಟಿಗೆ ಅಧ್ಯಕ್ಷತೆಯಲ್ಲಿ ಕಕ್ಕಿಂಜೆಯಲ್ಲಿ ಭಾನುವಾರ ನಡೆಯಿತು.
ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು ಮುಖ್ಯ ಭಾಷಣ ಮಾಡಿದರು. ರಾಜ್ಯ ಸಮಿತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಂಗಡಿ ಚಂದ್ರು ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ ನವಾಝ್ ಕಟ್ಟೆ ಅವರನ್ನು ಚಾರ್ಮಾಡಿ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಕ್ಕಿಂಜೆ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಗೊಳಿದಡಿ, ಮಸೀದಿ ಕಾರ್ಯದರ್ಶಿ ಇಬ್ರಾಹಿಂ ಬೊಂಟ್ರಪಾಲ್, ಚಾರ್ಮಾಡಿ ಮಸೀದಿ ಮಾಜಿ ಅಧ್ಯಕ್ಷ ಫಾಳ್ಕನ್ ಮೋನು, ಎಸ್‌ಡಿಪಿಐ ಬೆಂಬಲಿತ ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ದೀಕ್ ಹಾಗೂ ಆಯಿಷಾ, ಮಾಜಿ ಪಂಚಾಯತ್ ಸದಸ್ಯ ಸಿ. ಮೋನಕ, ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ ಉಜಿರೆ ಮತ್ತಿತರರು ಉಪಸ್ಥಿತರಿದ್ದರು. ಅಶ್ರಫ್ ಚಾರ್ಮಾಡಿ ಸ್ವಾಗತಿಸಿ, ಸಹಲ್ ನಿರ್ಸಾಲ್ ವಂದಿಸಿದರು. ಮರ್ಷಾ ಉಜಿರೆ ಕಾರ್ಯಕ್ರಮ ನಿರೂಪಿಸಿದರು.