Site icon Suddi Belthangady

ಸ. ಹಿ. ಪ್ರಾ. ಶಾಲೆ ಪೆರ್ಲ – ಬೈಪಾಡಿಯಲ್ಲಿ ಮೆಟ್ರಿಕ್ ಮೇಳ

ಬಂದಾರು: ಸ. ಹಿ. ಪ್ರಾ. ಶಾಲೆ, ಪೆರ್ಲ -ಬೈಪಾಡಿ ಯಲ್ಲಿ ಫೆ. 24ರಂದು ಮೆಟ್ರಿಕ್ ಮೇಳ ಆಯೋಜಿಸಲಾಗಿತ್ತು. ಸಂತೆ ಮೇಳದ ಉದ್ಘಾಟನೆಯನ್ನು ಎಸ್. ಡಿ. ಎಂ. ಸಿ ಅಧ್ಯಕ್ಷ ದಾಮೋದರ ಕೆ. ನೆರವೇರಿಸಿದರು. 4ರಿಂದ 7ನೇ ತರಗತಿ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು.

ತರಕಾರಿ, ಹಣ್ಣು, ಫ್ಯಾನ್ಸಿ ಸ್ಟೋರ್, ಹೋಟೆಲ್, ಬೇಕರಿ ಪದಾರ್ಥಗಳು, ಆಟದ ಸ್ಟಾಲ್ ಗಳು ಇದ್ದವು. ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತು ಸದಸ್ಯೆ ಅನಿತಾ ಕೆ. ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯೋಪಾಧ್ಯಾಯರಾದ ನಳಿನಿ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version