Site icon Suddi Belthangady

ಶ್ರೀ‌ ಧ. ಮಂ. ಕಲಾವಿಭಾಗ ವಿದ್ಯಾರ್ಥಿಗಳ ಕಲರವ-2025 ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾವಿಭಾಗದ ವಿದ್ಯಾರ್ಥಿಗಳ ಕಲರವ 2025 ಕಾರ್ಯಕ್ರಮವು ಸುದೀಕ್ಷ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಫೆ. 24ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾಲೇಜು ಪ್ರಾಂಶುಪಾಲ ಬಿ. ಎ. ಕುಮಾರ್ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೂಡಬಿದಿರೆ ಎಕ್ಸಲೆಂಟ್ ಕಾಲೇಜು ಅಧ್ಯಕ್ಷ ಯುವರಾಜ್ ಜೈನ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಪವರ್ ಪಾಯಿಂಟ್ ಬ್ಯಾಟರಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ವರ್ಮ ಜೈನ್, ಉಪಸ್ಥಿತರಿದ್ದರು. ಸಮ್ಮತಿ ಕುಮಾರ್ ಸ್ವಾಗತಿಸಿದರು. ಸಾಧಕರಿಗೆ ಸನ್ಮಾನಿಸಲಾಯಿತು. ವೀಕ್ಷ ಎಸ್. ವಿ. ಧನ್ಯವಾದವಿತ್ತರು.

Exit mobile version