Site icon Suddi Belthangady

ಬೆಳ್ತಂಗಡಿ ರೋಟರಿ ಆ್ಯನ್ಸ್ ಕ್ಲಬ್ ವತಿಯಿಂದ ಸ. ಪ್ರೌ. ಶಾಲೆ ನೇಲ್ಯಡ್ಕಕ್ಕೆ ವಿಜ್ಞಾನ ಉಪಕರಣಗಳ ಕೊಡುಗೆ

ಬೆಳ್ತಂಗಡಿ: ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸ. ಪ್ರೌ. ಶಾಲೆಗೆ ಬೆಳ್ತಂಗಡಿಯ ರೋಟರಿ ಆ್ಯನ್ಸ್ ಕ್ಲಬ್ ವತಿಯಿಂದ ಪ್ರೌಢ ಶಾಲೆಗೆ ಅಗತ್ಯವಿದ್ದ ವಿಜ್ಞಾನ ಪ್ರಯೋಗಾಲಯ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ರೋಟರಿ ಆ್ಯನ್ಸ್ ಕ್ಲಬ್ ನ ಅಧ್ಯಕ್ಷೆ ಗಾಯತ್ರಿ ಶ್ರೀಧರ್ ಇವರ ಮುತುವರ್ಜಿಯಿಂದ ಈ ಉಪಕರಣಗಳು ನೇಲ್ಯಡ್ಕ ಪ್ರೌಢಶಾಲೆಗೆ ಲಭಿಸಿದವು. ಬೆಳ್ತಂಗಡಿಯ ರೊಟೇರಿಯನ್ ಯಶವಂತ್ ಪಟವರ್ಧನ್ ಮತ್ತು ರಶ್ಮಿ ಪಟವರ್ಧನ್ ದಂಪತಿ ಈ ಕೊಡುಗೆಯನ್ನು ಪ್ರಾಯೋಜಿಸಿದ್ದರು.

ನೇಲ್ಯಡ್ಕ ಸ. ಪ್ರೌ. ಶಾಲೆಯಲ್ಲಿ ನಡೆದ ಉಪಕರಣಗಳ ಹಸ್ತಾಂತರ ಸಮಾರಂಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಯಶವಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಗಾಯತ್ರಿ ಶ್ರೀಧರ್, ಕ್ಲಬ್ ನ ಕಾರ್ಯದರ್ಶಿ ವಿನಯಾ ಕಿಶೋರ್, ರಶ್ಮಿ ಪಟವರ್ಧನ್, ಹೇಮಾ ಮತ್ತು ಸಂಸ್ಥೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಕೃಷ್ಣ ಹಾಗೂ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದಯಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅರವಿಂದ ಗೋಖಲೆ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು.

Exit mobile version