Site icon Suddi Belthangady

ಬಳಂಜ ಗುರುನಾರಾಯಣ ಸಂಘದಲ್ಲಿ ವಾರ್ಷಿಕ ಕ್ರೀಡಾ ಕೂಟ

ಬಳಂಜ: ಸಮಾಜದ ಒಗ್ಗೂಡುವಿಕೆಗೆ ಕ್ರೀಡಾಕೂಟ ಅಗತ್ಯವಿದ್ದು ಜೊತೆಗೆ ದೈಹಿಕ ಮಾನಸಿಕ ನೆಮ್ಮದಿಗೂ ಕ್ರೀಡೆ ಸಹಕಾರಿ. ಅದರಲ್ಲು ಬಿಲ್ಲವ ಸಮಾಜದ ಇತಿಹಾಸದಲ್ಲಿ ಕ್ರೀಡೆಗೆ ಮಹತ್ವ ನೀಡುವ ನಿದರ್ಶನಗಳು ಇದ್ದು ಇದನ್ನು ಯುವ ಪೀಳಗೆ ಮುಂದುವರೆಸುವ ಅಗತ್ಯವಿದೆ ಎಂದು ಬೆಳ್ತಂಗಡಿ ತಾಲೂಕು ಯುವಬಿಲ್ಲವ ವೇದಿಕೆಯ ಅದ್ಯಕ್ಷ ಎಂ. ಕೆ.ಪ್ರಸಾದ್ ಹೇಳಿದರು.

ಅವರು ಫೆ. 23ರಂದು ಬಳಂಜ ಬಿಲ್ಲವ ಸಂಘದ ವಠಾರದಲ್ಲಿ ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಸಹಕಾರದೊಂದಿಗೆ ಯುವ ಬಿಲ್ಲವ ವೇದಿಕೆ ಇವರ ನೇತ್ರತ್ವದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಬ್ರಹ್ಮಶ್ರಿ 2025 ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದ ಸಂಘಟನೆಗಳು ಸಮಾಜದ ಕಟ್ಟಕಡೆಯ ಕುಟುಂಬದ ಏಳಿಗೆಗೆ ಜೊತೆಯಾಗಿ ನಿಲ್ಲಬೇಕು ಆಗ ಸಂಘಟನೆ ಬೆಳೆಯಲು ಎಲ್ಲರು ಜೊತೆಯಾಗುತ್ತಾರೆ ಎಂದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅದ್ಯಕ್ಷ ಗುರುರಾಜ್ ಗುರುಪಳ್ಳ ಮಾತನಾಡಿ ಬಳಂಜ ಬಿಲ್ಲವ ಸಂಘವು ಕಳೆದ ನಲುವತ್ತೇಳು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅನೇಕ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದೆ. ಈ ಸಂಘವು ತಾಲೂಕಿನ ಎಲ್ಲಾ ಸಂಘಗಳಿಗೆ ಮಾದರಿ ಎಂದರು. ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಅದ್ಯಕ್ಷೆ ಶಾಂತಾ ಬಂಗೇರ ಮಾತನಾಡಿ ಸಂಘಟನೆಗಳಲ್ಲಿ ಹಿರಿಯರು ಯುವ ಸಮಾಜಕ್ಕೆ ಮಾರ್ಗದರ್ಶಕರಾಗಿ ಅವರ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ನೀಡಬೇಕು ಎಂದರು.

ಕಾರ್ಯಕ್ರಮವನ್ನು ಹಿರಿಯ ಕಂಬಳ ಒಟಗಾರ ಸದಾನಂದ ಪೂಜಾರಿ ಅಂತರ ಉದ್ಘಾಟಿಸಿದರು. ಬಳಂಜ ಯುವ ಬಿಲ್ಲವ ವೇದಿಕೆಯ ಅದ್ಯಕ್ಷ ಶರತ್ ಅಂಚನ್ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ರಿ ಇದರ ಅದ್ಯಕ್ಷ ಪತ್ರಕರ್ತ ಮನೋಹರ್ ಬಳಂಜ, ಸಂಘದ ಗೌರವಾಧ್ಯಕ್ಷ ಹೆಚ್. ದರ್ಣಪ್ಪ ಪೂಜಾರಿ, ಪ್ರದಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ಮಹಿಳಾ ಬಿಲ್ಲವ ವೇದಿಕೆಯ ಅದ್ಯಕ್ಷೆ ಭಾರತಿ ಸಂತೋಷ್, ಪ್ರದಾನ ಕಾರ್ಯದರ್ಶಿ ಅಶ್ವಿತಾ ಸಂತೋಷ್, ಯುವ ಬಿಲ್ಲವ ವೆದಿಕೆಯ ಪ್ರದಾನ ಕಾರ್ಯದರ್ಶಿ ಲತೇಸ್ ಪೆರಾಜೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿ ವಿಶಾಲ ಜಗದೀಶ್ ವಂದಿಸಿದರು.ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Exit mobile version