ಗುರುವಾಯನಕೆರೆ: ಕೆ.ಇ.ಬಿ. ರಸ್ತೆಯಲ್ಲಿ ನೂತನವಾಗಿ ಶುಭಾರಂಭಗೊಂಡ ಸಿ.ಎನ್.ಜಿ. ಫಿಟ್‌ಮೆಂಟ್ ಸೆಂಟರ್‌ನಲ್ಲಿ ರಾತ್ರಿ 7.45 ಗಂಟೆಗೆ ದುರ್ಗಾನಮಸ್ಕಾರ ಪೂಜೆ ನೆರವೇರಿತು.
ಪುರೋಹಿತ ಶ್ರೀಧರ ಕಟಪಾಡಿ ಹಾಗೂ ಅಕ್ಷಯ ಶರ್ಮಾ ತಂತ್ರಿಗಳ ನೇತೃತ್ವದಲ್ಲಿ ದುರ್ಗಾನಮಸ್ಕಾರ ಪೂಜೆ ನಡೆಯಿತು. ಗುಂಪಲಾಜೆಯ ಗಣೇಶ್ ಆಚಾರ್ಯರವರು ದುರ್ಗಾದೇವಿಯ ಮಂಡಲವನ್ನು ಬಿಡಿಸಿದರು.
ಮಾಲಕ ವಾಮನ್ ಆಚಾರ್ಯರವರ ಕುಟುಂಬಸ್ಥರು ಹಾಗೂ ಊರ ಗಣ್ಯರು ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.