ಧರ್ಮಸ್ಥಳ: ಶ್ರೀ ಧ. ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ. 22ರಂದು ವಿಶ್ವ ಚಿಂತನಾ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾನಿ ಪರಿಮಳ ಎಂ.ವಿ. ದೀಪ ಬೆಳಗಿಸಿ, ಸ್ಕೌಟ್ ಸಂಸ್ಥಾಪಕ ಬೇಡನ್ ಪವೆಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ ಸ್ಕೌಟ್ ಗೈಡ್ಸ್ ಕಬ್ ಬುಲ್ ಬುಲ್ಸ್ ಸರ್ವಧರ್ಮ ಪ್ರಾರ್ಥನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗೈಡ್ ಕ್ಯಾಪ್ಟನ್ ಗೀತಾ, ಲೇಡಿ ಕಬ್ ಮಾಸ್ಟರ್ ಅಮೃತ ವಿ ಶೆಟ್ಟಿ, ಹೇಮಾವತಿ ಜೈನ್, ಬನ್ನಿ ಶಿಕ್ಷಕಿ ಪ್ರೀತಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮವನ್ನು ಮಹಿಮಾ ನಿರೂಪಿಸಿ, ವಂದನಾರ್ಪಣೆ ಗೈದರು.