ಕಾಯರ್ತಡ್ಕ: “ದಕ್ಷ ” ಪ್ರಾಮಾಣಿಕ ಅಧಿಕಾರಿ ಎಂದೇ ಕಳೆಂಜ-ಪುದುವೆಟ್ಟು -ಶಿಶಿಲ ಭಾಗದಲ್ಲಿ ಮನೆ ಮಾತಾಗಿದ್ದ ಪ್ರಶಾಂತ್ ಪೂಜಾರಿಗೆ “ಸನ್ಮಾನ”.
ರಸ್ತೆಗಳಿಗೆ ಅಳವಡಿಸಿರುವ ನಾಮಫಲಕ ಅನಾವರಣ, ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಉಪ್ಪಿನಂಗಡಿ ವಿಭಾಗದ ಕಳೆಂಜ ಉಪವಲಯದಲ್ಲಿ ಡಿ. ಆರ್. ಎಫ್. ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಪೂಜಾರಿಯವರಿಗೆ ಕಳೆಂಜ ಗ್ರಾಮ ಅರಣ್ಯ ಸಮಿತಿ, ಉಮಾಮಹೇಶ್ವರ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಪಾದೆ ವತಿಯಿಂದ ಕಾಯರ್ತಡ್ಕದ ಉಮಾಮಹೇಶ್ವರ ದೇವಳದ ಸಭಾಭವನದಲ್ಲಿ ಊರಿನವರ ಸಮ್ಮುಖದಲ್ಲಿ ಸನ್ಮಾನ ನೆರವೇರಿತು.
ಎ. ಸಿ. ಎಫ್. ಸುಬ್ಬನಾಯ್ಕ್, ಆರ್. ಎಫ್. ಒ ರಾಘವೇಂದ್ರ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಉಮಾ ಮಹೇಶ್ವರ ದೇವಸ್ಥಾನದ ಅಧ್ಯಕ್ಷ ಆನಂದ ಗೌಡ ಮರಕ್ಕಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ್ ಗೌಡ ಹಾರಿತ್ತ ಕಜೆ, ಕಳೆಂಜದಲ್ಲಿ ಪ್ರಭಾರ ಉಪವಲಯ ಅರಣ್ಯಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಭರತ್, ಗ್ರಾಮ ಪಂಚಾಯತ್ ಸದಸ್ಯರಾದ ನಿತ್ಯಾನಂದ ರೈ,ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿತ್ಯಾನಂದ ರೈ ಅತಿಥಿಗಳನ್ನು ಸ್ವಾಗತಿಸಿದರು ಕಳೆಂಜ ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ್ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ಗೌಡ ಕಲ್ಕಡ ಧನ್ಯವಾದವಿತ್ತರು.
ಊರಿನ ಗಣ್ಯ ವ್ಯಕ್ತಿಗಳಾದ ಪುದುವೆಟ್ಟು ವನದುರ್ಗ ದೇವಸ್ಥಾನದ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ, ಪಿ. ಎಲ್. ಡಿ ಬ್ಯಾಂಕ್ ನಿರ್ದೇಶಕ ಸಂತೋಷ್ ಜೈನ ವಲಂಬಳ, ಅರಣ್ಯ ಸಮಿತಿ ಸದಸ್ಯರು ಭಜರಂಗದಳ ಜಿಲ್ಲಾ ಪ್ರಮುಖ್ ಗಣೇಶ್, ಕಳೆಂಜ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಪ್ರಶಾಂತ ರವರಿಗೆ ಶುಭಾಶಯ ತಿಳಿಸಿದರು.
ಸನ್ಮಾನಕ್ಕೂ ಮುನ್ನ ಗ್ರಾಮ ಅರಣ್ಯ ಸಮಿತಿ ವತಿಯಿಂದ ಕಳೆಂಜ ಗ್ರಾಮದ ಹಲವಾರು ರಸ್ತೆಗಳಿಗೆ ನಾಮಫಲಕ ಅಳವಡಿಸಿದ್ದು ಇದರ ಉದ್ಘಾಟನೆಯನ್ನು ಆರ್. ಎಫ್. ಒ ಸುಬ್ಬಾ ನಾಯ್ಕ್ ನೆರವೇರಿಸಿದರು.