Site icon Suddi Belthangady

ಸರಳಿಕಟ್ಟೆ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ

ಸರಳಿಕಟ್ಟೆ: ಯೆನಪೋಯ ವಿಶ್ವವಿದ್ಯಾಲಯ ವತಿಯಿಂದ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ದಯಾನಂದ್, ಅಬೂಬಕರ್ ಪುತ್ತು, ಅವಿನಾಶ್ ಎಚ್ ಗೌಡ, ಅನುರಾಧ ಪಿ ಆರ್, ಸುಬ್ರಮಣ್ಯ ರಾವ್, ಇನಾಸ್ ರೋಡ್ರಿಗಸ್, ಅಬ್ಬಾಸ್ ಮಡಿಕೇರಿ ಬೆಟ್ಟು, ಅಬ್ದುಲ್ ಹಕೀಂ ತನಲ್, ಅನ್ವರ್, ನೌಮಾನ್, ಜುಬೈದ, ಸಫೀನ, ಮಹಮ್ಮದ್ ಕೈಸ್, ಫಿಲ್ಮಿ ಮೆಹಬೂಬ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಎನ್ ಎಸ್ ಎಸ್ ಶಿಬಿರದ ಸಂಯೋಜಕ ಅಬ್ದುಲ್ ರಶೀದ್ ರವರು ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಬೂಬಕರ್ ಪುತ್ತು ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಕುರಿತು ಉದ್ಘಾಟನಾ ನುಡಿಗಳನ್ನು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಿತ ನುಡಿಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದಯಾನಂದ್ ಅಧ್ಯಕ್ಷೀಯ ನುಡಿಗಳನ್ನು ಮಾತನಾಡುವ ಮೂಲಕ ಶಿಬಿರಾರ್ಥಿಗಳಿಗೆ ಸ್ವಾಗತ ಹಾಗೂ ಶುಭವನ್ನು ಕೋರಿದರು.

ಶಾಕೀರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು. ಶಿಕ್ಷಕ ಸುನಿಲ್ ಕುಮಾರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಅಭಿಷೇಕ್ ಆರ್ .ಎನ್. ಸಹಕರಿಸಿದರು.

Exit mobile version