Site icon Suddi Belthangady

ತಾಲೂಕು ಆಸ್ಪತ್ರೆಯ ಅಂಬುಲೆನ್ಸ್ ಚಾಲಕರಾಗಿದ್ದ ಅಬ್ದುಲ್ ರಝಾಕ್ ರಿಗೆ ವಯೋ ನಿವೃತ್ತಿ: ಬೀಳ್ಕೊಡುಗೆ

ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆ ಅಂಬುಲೆನ್ಸ್ ಚಾಲಕನಾಗಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ವಾಹನ ಚಾಲಕನಾಗಿ ಸುಮಾರು 26 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋ ನಿವ್ರತ್ತಿ ಹೊಂದಿದ ಅಬ್ದುಲ್ ರಝಾಕ್ ಅವರಿಗೆ ವಿದಾಯ ಕೂಟ ಕಾರ್ಯಕ್ರಮ ಫೆ. 19ರಂದು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ತಾ. ಆರೋಗ್ಯಾಧಿಕಾರಿ ಡಾ‌. ಸಂಜತ್, ನಿವೃತ್ತ ತಾ. ಆರೋಗ್ಯಾಧಿಕಾರಿ ಡಾ.‌ ಕಲಾಮಧು ಶೆಟ್ಟಿ, ಬಂಟ್ವಾಳ ಮತ್ತು ಸುಳ್ಯದ ತಾಲೂಕು ಆರೋಗ್ಯಾಧಿಕಾರಿ ಭಾಗವಹಿಸಿ ನಿವೃತ್ತರ ಸೇವೆಯ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿಗಳು, ಎಲ್ಲಾ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು. ಅಬ್ದುಲ್ ರಝಾಕ್ ಅವರ ವ್ರತ್ತಿ ಬದುಕಿನಲ್ಲಿ ಅವರ ಸೌಮ್ಯ ಸ್ವಭಾವ, ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆ, ಅಪಘಾತ ರಹಿತ ಉತ್ತಮ ಚಾಲನೆಯ ಸೇವೆಯನ್ನು ಪ್ರಶಂಸಿಸಿ ಶಾಲು, ಫಲಪುಷ್ಪ ನೀಡಿ ದಂಪತಿ ಸಮೇತ ಗೌರವಿಸಲಾಯಿತು. ಅಜಯ್ ಕಲ್ಲೇಗ ಕಾರ್ಯಕ್ರಮ ನಿರೂಪಿಸಿದರು.

Exit mobile version