ಬೆಳ್ತಂಗಡಿ: ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಕು.ಸ್ಟೆಲ್ಲಾ ವರ್ಗೀಸ್ ಫೆ.17ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತಃ ಕಲ್ಬುರ್ಗಿಯವರಾಗಿದ್ದು ಬಿ.ಎಸ್.ಸಿ ಪದವೀಧರೆಯಾಗಿರುವ ಕು|ಸ್ಟೆಲ್ಲಾ ವರ್ಗೀಸ್ ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿದ್ದರು. ಪುತ್ತೂರಿನಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಾಪಾತ್ರ ಅವರು ರಾಯಚೂರು ಮಹಾನಗರ ಪಾಲಿಕೆಯ ನಗರ ಆಯುಕ್ತರಾಗಿ ವರ್ಗಾವಣೆಗೊಂಡ ಬಳಿಕ ಪ್ರೊಬೆಷನರಿ ಎಸಿಯಾಗಿ ಶ್ರವಣ್ ಕುಮಾರ್ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದರು.