Site icon Suddi Belthangady

ವಸತಿ ರಹಿತ ಫಲಾನುಭವಿಗಳಿಗೆ ಆವಾಸ ಯೋಜನೆಯ ಅರ್ಜಿ ಆಹ್ವಾನ

ಬೆಳ್ತಂಗಡಿ: ಸರಕಾರದಿಂದ ಆವಾಸ ಯೋಜನೆಯಲ್ಲಿ ವಸತಿ (ಮನೆ) ರಹಿತ ರ ಪಟ್ಟಿಯನ್ನು ಪ್ರತೀ ಗ್ರಾಮ ಪಂಚಾಯತ್ ನಲ್ಲಿ ಕೇಳಿದ್ದು, ಅದಕ್ಕಾಗಿ ಆಯಾಯ ಗ್ರಾಮ ಪಂಚಾಯತ್ ಗಳಲ್ಲಿ ವಸತಿ (ಮನೆ) ರಹಿತ ಫಲಾನುಭವಿಗಳು ಈ ಕೆಳಗಿನ ದಾಖಲೆಗಳೊಂದಿಗೆ ಆವಾಸ ಯೋಜನೆಯ ಹೊಸ ಅರ್ಜಿಯನ್ನು ಗ್ರಾಮ ಪಂಚಾಯತ್ ನಲ್ಲಿ ಸಲ್ಲಿಸುವುದು.

1) ಫಹಣಿ ಪತ್ರ (ಆರ್.ಟಿ.ಸಿ)
ಫಹಣಿ ಪತ್ರವು ಕಡ್ಡಾಯವಾಗಿ ಅರ್ಜಿದಾರರ ಹೆಸರಿನಲ್ಲಿಯೇ ಇರಬೇಕು.
2) ಆದಾರ್ ಕಾರ್ಡ್
3) ರೇಶನ್ ಕಾರ್ಡ್
4) ವೋಟರ್ ಐಡಿ
5) ರಾಷ್ಟ್ರೀಕೃತ ಬ್ಯಾಂಕಿನ ಪಾಸು ಪುಸ್ತಕ
6) ಜಾತಿ ಆದಾಯ
7) ಮೊಬೈಲ್ ನಂಬ್ರ

ವಿ.ಸೂ:
1)ಕೊನೆಯ ದಿನಾಂಕ ಮಾ.5 ಆಗಿರುತ್ತದೆ.
2) ಅರ್ಜಿದಾರರ ಹೆಸರಿನಲ್ಲಿ ಸುಸಜ್ಜಿತ ಮನೆ ಇದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಆವಾಸ್ ಯೋಜನೆ ಗ್ರಾಮೀಣದಡಿ ವಸತಿ ರಹಿತರ ಸಮೀಕ್ಷೆ ಮಾಡುವಾಗ ಈ ಕೆಳಕಂಡ ಸೌಲಭ್ಯ ಹೊಂದಿರುವ ಕುಟುಂಬಗಳು ಅನರ್ಹರಾಗಿರುತ್ತಾರೆ.

  1. ಯಾಂತ್ರಿಕೃತ 3 / 4 ಚಕ್ರದ ಕೃಷಿ ಉಪಕರಣಗಳನ್ನು ಹೊಂದಿರುವ ಕುಟುಂಬ
  2. ಮೋಟಾರಿಕೃತ 3 / 4 ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬ
  3. ರೂ.50000/- ಅಥವಾ ಅದಕ್ಕಿಂತ ಹೆಚ್ಚಿನ ಕ್ರೇಡಿಟ್ ಮಿತಿಯೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಕುಟುಂಬ
  4. ಕುಟುಂಬದ ಸದಸ್ಯರು ಸರ್ಕಾರಿ ನೌಕರನಾಗಿದ್ದರೆ
  5. ಸರ್ಕಾರದಲ್ಲಿ ನೊಂದಾಯಿಸಲಾದ ಕೃಷಿಯೇತರ ಉದ್ಯಮಗಳನ್ನು ಹೊಂದಿರುವ ಕುಟುಂಬ
  6. ತಿಂಗಳಿಗೆ ರೂ.15000/- ಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬ
  7. ಆದಾಯ ತೆರಿಗೆ ಪಾವತಿಸುವ ಕುಟುಂಬ
  8. ವೃತ್ತಿಪರ ತೆರಿಗೆ ಪಾವತಿಸುವ ಕುಟುಂಬ
  9. 2.5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ನೀರಾವರಿ ಭೂಮಿಯನ್ನು ಹೊಂದಿರುವ ಕುಟುಂಬ
  10. 5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನನ್ನು ಹೊಂದಿರುವ ಕುಟುಂಬ.
Exit mobile version