ನಾವೂರು: ಫೆ. 20ರಂದು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ2023 -2024ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆಯಲ್ಲಿ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ.ಬಿ.ಕೆ ಸೇವಿತ ಒಕ್ಕೂಟದ ವಾರ್ಷಿಕ ವರದಿ ಹಾಗೂ ಒಕ್ಕೂಟದ ಆಯವ್ಯಯ ಮಂಡಿಸಿ ಅನುಮೋದನೆಯನ್ನು ಪಡೆದರು.
ವಲಯ ಮೇಲ್ವಿಚಾರಕರಾದ ಜಯಾನಂದರವರು ಪ್ರಾಸ್ತವಿಕವಾಗಿ ಮಾತನಾಡಿ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು . ಗೋಪಿಕಾ ಸಂಜೀವಿನಿ ಸದಸ್ಯರು ಮಾಡಿದ ರಾಗಿಹುಡಿಯನ್ನು ಬಿಡುಗಡೆ ಮಾಡಲಾಯಿತು.
ರಾಜ್ಯ ಪ್ರಶಸ್ತಿ ಪಡೆದ ಜಯಾನಂದರವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಭೆಯಲ್ಲಿ ರಕ್ಷಿತ್ ಜೈನ್ ಸಾಮಾಜಿಕ ಲೆಕ್ಕ ಪರಿಶೋದನೆಯ, ಜಿಲ್ಲಾ ಸಂಯೋಜಕ ಸಂಸ್ಥೆಯ ಬಗ್ಗೆ ಮಾತನಾಡಿದರು. ನಮ್ಮ ಸಂಘದ ಸದಸ್ಯರು “ನಮ್ಮ ಕಸ ” ನಮ್ಮ ಜವಾಬ್ದಾರಿ ” ಎಂಬ ವಿಷಯ ಬಗ್ಗೆ ಕಿರು ಪ್ರಹಸನ ದ ಮೂಲಕ ಸಂದೇಶ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಗೌಡ, ಉಪಸ್ಥಿತರಿದ್ದರು.
ಶಕ್ತಿ ಸಂಜೀವಿನಿ ಸಂಘದ ಸದಸ್ಯೆ ಎವುಲಿನ ಡಿಸಿಲ್ವ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದಸಿದರು. ಕೊನೆಯಲ್ಲಿ ಲಕ್ಕಿ ಗೇಮ್ ಮಾಡಲಾಯಿತು. ಈ ಬಹುಮಾನವನ್ನು ಸಂಘದ ಸದಸ್ಯರಾದ ಯಮುನಾ, ಪ್ರಿಯದರ್ಶಿನಿ, ಬಾಲಕ ಇವರು ಪಡೆದುಕೊಂಡರು.
ಒಕ್ಕೂಟ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷಿಯ ಭಾಷಣ ಮಾಡಿದರು. ಕೃಷಿ ಸಖಿ ಹರಿಣಾಕ್ಷಿ ನಿರೂಪಣೆ ಮಾಡಿ ಎಲ್. ಸಿ. ಆರ್. ಪಿ ಜಯಂತಿ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಸಹಕಾರ ನೀಡಿದರು. ಸೇವಿತ ಧನ್ಯವಾದವಿತ್ತರು.