Site icon Suddi Belthangady

ಬಳಂಜ ಆನೆಪಿಲ ದೊಂಪದಬಲಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಂಜ: ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಕ್ಷೇತ್ರ ಆನೆಪಿಲ ದೈವಗಳ ಕಟ್ಟೆ ಹಾಗೂ ಮಹಮ್ಮಾಯಿ ಅಮ್ಮನವರ ಕಟ್ಟೆಯು ಜೀರ್ಣೋದ್ಧಾರಗೊಂಡು ಫೆ. 23ರಂದು ನಡೆಯುವ ದೊಂಪದಬಲಿ ನೇಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇತ್ತೀಚೆಗೆ ಆನೆಪಿಲ ಕ್ಷೇತ್ರದಲ್ಲಿ ನಡೆಯಿತು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ, ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಹೇರ ಗುತ್ತಿನ ಅಜಿತ್ ಕುಮಾರ್ ಜೈನ್, ರತ್ನಾಕರ ಪೂಜಾರಿ, ದಿನೇಶ್ ಅಂತರ, ಗುತ್ತು ಗುರಿಕಾರರು ಊರಿನ ಗಣ್ಯರು ಉಪಸ್ಥಿತರಿದ್ದರು.

Exit mobile version