Site icon Suddi Belthangady

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕೊಕ್ಕಡ: ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂದಿನ 3 ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿಗಳು, ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಬೆಂಗಳೂರು ಇವರು ಆದೇಶಿಸಿದ್ದಾರೆ.

ಸಾಮಾನ್ಯ ಸ್ಥಾನದಿಂದ ವಿಶ್ವನಾಥ.ಕೆ ಕೊಲ್ಲಾಜೆ, ಸುಬ್ರಹ್ಮಣ್ಯ ಶಬರಾಯ.ಕೆ, ಪ್ರಶಾಂತ್. ರೈ ಅರಂತಬೈಲು ಗೋಳಿತೊಟ್ಟು , ಗಣೇಶ್ ಕಾಶಿ, ಉದಯ ಶಂಕರ ಶೆಟ್ಟಿ ಆರಿಯಡ್ಕ, ಮಹಿಳಾ ಸ್ಥಾನದಿಂದ ಲೋಕೇಶ್ವರಿ ವಿನಯಚಂದ್ರ ವಳಂಬ್ರ, ಸಿನಿ ಕೊಕ್ಕಡ. ಪ.ಜಾತಿ ಮತ್ತು ಪ.ಪಂಗಡದಿಂದ ಹರಿಶ್ಚಂದ್ರ.ಜಿ. ಅರ್ಚಕ ವರ್ಗದಿಂದ ಸತ್ಯಪ್ರಿಯ ಕಲ್ಲೂರಾಯ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.

Exit mobile version