ಬೆಳ್ತಂಗಡಿ: ಮುಂಡೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದಿನ 3 ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ರಮಾನಂದ ಸಾಲಿಯಾನ್ ಮುಂಡೂರು, ಸದಸ್ಯರಾಗಿ ಹರಿಶ್ಚಂದ್ರ ಹೆಗ್ಡೆ, ನೀತಾ ಮಹೇಶ್ ಕುಮಾರ್, ಪುಷ್ಪಾ ಶೆಟ್ಟಿ, ಅಶೋಕ್ ಕುಮಾರ್ ಕೊಡಕ್ಕಲ್, ರುಕ್ಮಯ ನಾಯ್ಕ, ರಮೇಶ್ ದೇವಾಡಿಗ, ಪುರಂದರ ಆಚಾರ್ಯ ಮತ್ತು ಅರ್ಚಕರಾಗಿ ಅರವಿಂದ ಭಟ್ ನೇಮಕವಾಗಿದ್ದಾರೆ.
ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷ, ಸದಸ್ಯರ ನೇಮಕ
