ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ಕಳೆದ 13 ವರ್ಷಗಳಿಂದ ನಿರಂತರವಾಗಿ ಸದಾ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಶಿಕ್ಷಣ, ಧಾರ್ಮಿಕ, ಆರೋಗ್ಯ, ಸರಕಾರಿ ಶಾಲೆ ಸ್ವಚ್ಛಾಲಯ, ಸಾಮೂಹಿಕ ವಿವಾಹ ಮುಂತಾದ ಚಟುವಟಿಕೆಗಳ ಮುಖಾಂತರ ರಾಜ್ಯದಲ್ಲಿ ಮನೆಮಾತಾಗಿರುವ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇದರ ನೂತನ ಮಡಿಕೇರಿ ಘಟಕವನ್ನು ಸ್ಥಾಪಿಸಲಿದೆ.
ಈಗಾಗಲೇ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಮಡಿಕೇರಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ರಂಜಿತ್ ಪಾಲ್ತಾಡು ದೇವಸ್ಯ ಇವರನ್ನು ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಘೋಷಿಸಿದ್ದಾರೆ. ಈಗಾಗಲೇ ಚಿಕ್ಕಮಂಗಳೂರು, ಹಾಸನ, ಉಡುಪಿ, ಬೆಂಗಳೂರು ಗ್ರಾಮಾಂತರ, ಇನ್ನು ಕರ್ನಾಟಕದತ್ತ ವಿಸ್ತರಿಸಲಿದೆ ಎಂದು ತಿಳಿಸಿದ್ದಾರೆ.