Site icon Suddi Belthangady

ಮಾಚಾರು ಕೋರ್ಯಾರುಗುತ್ತು ವ್ಯಾಘ್ರ ಚಾಮುಂಡೇಶ್ವರಿ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತಿ ಉತ್ಸವ, ದೊಂಪದಬಲಿ

ಉಜಿರೆ: ಮಾಚಾರು ಕೋರ್ಯಾರುಗುತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ವತಿಯಿಂದ ಫೆ. 17 ಮತ್ತು 18ರಂದು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ದೊಂಪದ ಬಲಿ ಜರಗಿತು.

ಫೆ. 17ರ೦ದು ಪ್ರತಿಷ್ಠಾ ವರ್ಧಂತಿಯಂದು ಬೆಳಿಗ್ಗೆ ಕೋರ್ಯಾರು ಗುತ್ತು ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ನಾಗ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ತಂಬಿಲ ಸೇವೆ, ಮಹಾ ಪೂಜೆ ಮತ್ತು ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಸ್ಥಳೀಯರಿಂದ ಭಜನೆ, ಭಂಡಾರ ಇಳಿಯುವುದು ಬಳಿಕ ಕೊರ್ಯಾರು ಗುತ್ತು ಚಾವಡಿಯಲ್ಲಿ ವ್ಯಾಘ್ರ ಚಾಮುಂಡೇಶ್ವರಿ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು.

ಫೆ. 18ರಂದು ಬೆಳಿಗ್ಗೆ ದುರ್ಗಾ ಪೂಜೆ, ಕಲಶಾಭಿಷೇಕ, ಮಹಾ ಪೂಜೆ, ಅನ್ನಸಂತರ್ಪಣೆ ಜರಗಿತು. ಸಂಜೆ ಭಜನಾ ಭಜನೆ, ಭಂಡಾರ ಇಳಿದು ದೊಂಪದ ಬಲಿ ಉತ್ಸವ, ಅನ್ನಸಂತರ್ಪಣೆ ನಡೆಯಿತು. ಆಡಳಿತ ಮೊಕ್ತಸರ, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಜಿ. ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿಲೀಪ್‌ ಕುಮಾ‌ರ್, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version