Site icon Suddi Belthangady

ಬೆಳಾಲು ಅನಂತೋಡಿ ದೇವಸ್ಥಾನದಲ್ಲಿ ಅದಮಾರು ಶ್ರೀಗಳಿಂದ ಧಾರ್ಮಿಕ ಪ್ರವಚನ – ಪುಸ್ತಕ ಬಿಡುಗಡೆ

ಬೆಳಾಲು: ತೊಡ್ತಿಲ್ಲಾಯ ಕುಟುಂಬದ ಲಕ್ಷ್ಮೀನಾರಾಯಣ ರಾವ್ ಮತ್ತು ಶೋಭಾ ಇವರ ಷಷ್ಟಿಪೂರ್ತಿ ಉತ್ಸವದ ಅಂಗವಾಗಿ ಬೆಳಾಲಿನ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಉಗ್ರರಥ ಶಾಂತಿ ವಿಧಾನಗಳು ಫೆ. 11ರಿಂದ 14ರ ತನಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಧಾರ್ಮಿಕ ಪ್ರವಚನ ಸಾಯಂಕಾಲ 6ರಿಂದ ನಡೆಯಿತು. ಸತ್ಯನಾರಾಯಣ ಆಚಾರ್ ರವರ ಅರವತ್ತು ತುಂಬಿದಾಗ ಪುಸ್ತಕವನ್ನು ಅದಮಾರು ಶ್ರೀ ಮತ್ತು ಸುಬ್ರಹ್ಮಣ್ಯ ಶ್ರೀ ಮಠದ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದ ಯಶಸ್ವಿಗೆ ತೊಡ್ತಿಲ್ಲಾಯ ಕುಟುಂಬದ ದೀಪ್ತಿ, ಸಮೀರಣ, ಕುಮಾರಿ ಮೇಧಾ, ಕಲ್ಯಾಣಿ, ವಸುಧಾ, ಹರೀಶ್, ಪ್ರೇಮಾ, ಸತ್ಯನಾರಾಯಣ, ವಿದ್ಯಾ, ವೆಂಕಟೇಶ ಮತ್ತು ಕುಟುಂಬಸ್ಥರು ಸಹಕರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಸದಸ್ಯರು, ಭಜನಾ ಮಂಡಳಿ ಸದಸ್ಯರು, ಊರವರು, ತೊಡ್ತಿಲ್ಲಾಯರ ಹಿತೈಷಿಗಳು ಉಪಸ್ಥಿತರಿದ್ದರು.

Exit mobile version