Site icon Suddi Belthangady

ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ


ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಿಬಿದ್ರೆ- ಮುಂಡಾಜೆ ಗಡಿ ಭಾಗದ ರಸ್ತೆ ಬದಿ ಇರುವ ಶ್ರೀ ಉಳ್ಳಾಯ-ಉಳ್ಳಾಲ್ತಿ ಕಟ್ಟೆಯ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳ್ಳತನ ಮಾಡಿದ ಘಟನೆ ಫೆ. 18ರಂದು ಹಗಲು ಹೊತ್ತು ನಡೆದಿದೆ.

ಮಧ್ಯಾಹ್ನ 11ರಿಂದ 1 ಗಂಟೆ ಅವಧಿಯೊಳಗೆ ಯಾರೋ ಕಳ್ಳರು ಡಬ್ಬಿಯನ್ನು ಒಡೆದು ಹಣವನ್ನು ದೋಚಿದ್ದಾರೆ.

ವಾರಕ್ಕೆ ಒಮ್ಮೆ ಕಾಣಿಕೆ ಡಬ್ಬಿಯಿಂದ ಸಮಿತಿಯವರು ಹಣ ಸಂಗ್ರಹಿಸುತ್ತಿದ್ದರು. ಹಾಗೂ ಸುಮಾರು 3000 ರೂ.ಗಿಂತ ಅಧಿಕ ಕಾಣಿಕೆ ಜಮೆಯಾಗುತ್ತಿತ್ತು.

ಕಳೆದ 4 ದಿನಗಳ ಹಿಂದೆ ಹಣ ಸಂಗ್ರಹಿಸಿದ್ದು, 2,000 ರೂ. ಗಿಂತ ಅಧಿಕ ಹಣ ಕಳ್ಳತನವಾಗಿರಬಹುದು ಎಂದು ಇಲ್ಲಿನ ಮುಖ್ಯಸ್ಥ ಗಣೇಶ ಬಂಗೇರ ತಿಳಿಸಿದ್ದಾರೆ.

Exit mobile version