ಬೆಳ್ತಂಗಡಿ: ಅನ್ಸಾರಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಮಂಞನೊಟ್ಟು ಬೆಳಾಲುನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಔಲಿಯಾಗಳ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಕಾರ್ಯಕ್ರಮ ಫೆ. 25ರಿಂದ 27ರವರೆಗೆ ನಡೆಯಲಿದೆ.
ಐತಿಹಾಸಿಕ ಝಿಯಾರತ್ ಕೇಂದ್ರವಾದ ಕಾಜೂರಿನಲ್ಲಿ ಕಳೆದ 26 ವರ್ಷಗಳಿಂದ ಪ್ರಧಾನ ಧರ್ಮಗುರುಗಳಾಗಿ ನಾಡಿಗೆ ಧಾರ್ಮಿಕ ನೇತೃತ್ವ ನೀಡುತ್ತಿರುವ ಪ್ರಖ್ಯಾತ ವಾಗ್ಮಿ ಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ, ಹಾಗೂ ಮಾಚಾರು ಜಮಾಅತ್ ಖತೀಬ್ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಪದಾಧಿಕಾರಿಗಳ ಮಾರ್ಗದರ್ಶನದೊಂದಿಗೆ ಮೂರು ದಿನಗಳ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ನಡೆಯಲಿದೆ.
ಫೆ. 25ರಂದು ಉರೂಸ್ ಆರಂಭದ ದಿನದಂದು ಮಸ್‌ಊದ್ ಸಅದಿ ಪದ್ಮುಂಜ ಅವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್, ಫೆ. 26ರಂದು ಮೂಡಡ್ಕ ಅಲ್‌ಮದೀನತುಲ್ ಮುನವ್ವರ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಲಾಹುದ್ದೀನ್ ಸಖಾಫಿ ಮಾಡನ್ನೂರ್ ಅವರಿಂದ ಧಾರ್ಮಿಕ ಉಪನ್ಯಾಸ, ಫೆ. 27ರಂದು ಉರೂಸ್ ಸಮಾರೋಪ ಮತ್ತು ಅನ್ನದಾನ ನಡೆಯಲಿದೆ.
ಸಯ್ಯಿದ್ ಕಾಜೂರು ತಂಙಳ್ ದುಆ ನೇತೃತ್ವ ನೀಡುತ್ತಿದ್ದು ಅಶ್ಹರಿಯ್ಯ ಮುಹಮ್ಮದ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಾಮೂಹಿಕ ಝಿಯಾರತ್ ಬಳಿಕ ಅನ್ನದಾನ ನಡೆಯಲಿದೆ.
ಸದ್ರಿ ಉರೂಸ್ ಕಾರ್ಯಕ್ರಮದ ಪ್ರಚಾರ ಫಲಕವನ್ನು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಶ ಬಿ. ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರ ಹಸ್ತದಲ್ಲಿ ಬಿಡುಗಡೆಗೊಳಿಸಲಾಯಿತು. ವಕ್ಫ್ ಜಿಲ್ಲಾ ಉಪಾದ್ಯಕ್ಷರುಗಳಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ಮತ್ತು ಅಶ್ರಫ್ ಕಿನಾರ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದಿಕ್ ಜೆ. ಹೆಚ್. ಕಾಜೂರು, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು ಮತ್ತು ಹನೀಫ್ ಮಲ್ಲೂರ್ ಹಾಗೂ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್ ಹಾಜಿ ಹಾಜರಿದ್ದರು. ಅನ್ಸಾರಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಮಂಜನೊಟ್ಟು ಬೆಳಾಲು ಇದರ ಪ್ರಮುಖರು ಉಪಸ್ಥಿತರಿದ್ದು, ಪ್ರಚಾರಕ್ಕೆ ಚಾಲನೆ ನೀಡಿದರು.