ಬೆಳ್ತಂಗಡಿ: ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿರವರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಭೇಟಿ ಸಂದರ್ಭದಲ್ಲಿ, ಗುರುವಾಯನಕೆರೆ ವರದ ಪಾಂಡುರಂಗ ವಿಠ್ಠಲ ಮಂದಿರಕ್ಕೆ ಭೇಟಿ ನೀಡಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಂದಿರದ ಅಧ್ಯಕ್ಷ ವಿಶ್ವೇಶ್ ಕಿಣಿ, ಟ್ರಸ್ಟಿ ಪ್ರಕಾಶ್ ಕಾಮತ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ ನಾಯಕ್ ಹಾಗೂ ಪ್ರಮುಖರಾದ ಧನಂಜಯ್ ರಾ, ದಿನೇಶ್ ಮೂಲ್ಯ ಕೊಂಡೆಮಾರು ಉಪಸ್ಥಿತರಿದ್ದರು.