Site icon Suddi Belthangady

ಬರೆಂಗಾಯ: ಸ. ಉ. ಹಿ. ಪ್ರಾ. ಶಾಲೆಯಲ್ಲಿ ಕಲಿಕಾ ಹಬ್ಬ

ನಿಡ್ಲೆ: ಸ. ಉ. ಹಿ. ಪ್ರಾ. ಶಾಲೆ ಬರೆಂಗಾಯದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾ ಹಬ್ಬವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶಾಲೆಯ ಎಸ್. ಡಿ. ಎಮ್. ಸಿ ಯ ಗೌರವಾನ್ವಿತ ಅಧ್ಯಕ್ಷ ರುಕ್ಮಯ ಪೂಜಾರಿ ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಹೆಬ್ಬಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಸವಲಿಂಗಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿಗಳು ಬೆಳ್ತಂಗಡಿ ಚೇತನಾಕ್ಷಿ, ಶಿಕ್ಷಣ ಸಂಯೋಜಕರು ಪ್ರೌಢಶಾಲಾ ವಿಭಾಗ ಬೆಳ್ತಂಗಡಿ ಪ್ರತಿಮಾ, ಸಮೂಹ ಸಂಪನ್ಮೂಲ ವ್ಯಕ್ತಿ ನಿಡ್ಲೆ ಕ್ಲಸ್ಟರ್ ಭಾಗವಹಿಸಿದ್ದರು.

ಅತಿಥಿಗಳಾಗಿ ಸುರೇಶ್ ಮಾಚಾರ್ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಐರನ್ ಡೇಸ ಉಪಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜ್ಯೋತಿ ಸಹ ಕಾರ್ಯದರ್ಶಿಗಳು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಳ್ತಂಗಡಿ, ಕೃಷ್ಣಪ್ಪ ಟಿ. ಮುಖ್ಯ ಗುರು ಕಳೆಂಜ ಶಾಲೆ, ಸುರೇಶ ಆಚಾರ್ ಮುಖ್ಯಗುರು ದೊಂಪದ ಪಲ್ಕೆ, ಮಂಜುಳಾ ಜೆಟಿ ಮುಖ್ಯ ಗುರು ಗುರಿಪಳ್ಳ ಶಾಲೆ ಹಾಗೂ ಶ್ರೀ ಗೋಪಾಲ್ ಮುಖ್ಯ ಶಿಕ್ಷಕರು ಬರಂಗಾಯ ಶಾಲೆ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಮೆರವಣಿಗೆಯ ಮುಖಾಂತರವಾಗಿ ಮಕ್ಕಳನ್ನು ಕರೆದುಕೊಂಡು ಬಂದು ಸ್ವಾಗತಿಸಲಾಯಿತು. ಪ್ರತಿಮಾ ಪ್ರಸ್ತಾವಿಕವಾಗಿ ಕಲಿಕಾ ಹಬ್ಬದ ಕುರಿತಾಗಿ ಮಾತನಾಡಿದರು. ಬಸವಲಿಂಗಪ್ಪ ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಲಿಕಾ ಹಬ್ಬದ ಚಟುವಟಿಕೆಗಳ ಪ್ರಯೋಜನವನ್ನು ತಾವುಗಳು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.

ಎಫ್. ಎಲ್. ಎನ್ ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಕೊಠಡಿಗಳಿಗೆ ತೆರಲಾಯಿತು. ಗಟ್ಟಿ ಓದು, ರಸಪ್ರಶ್ನೆ, ಕಥೆ ಹೇಳುವುದು, ನಿಧಿಶೋದನೆ ಜ್ಞಾಪಕ ಶಕ್ತಿ, ಮೋಜಿನ ಗಣಿತ, ಪೋಷಕರೊಂದಿಗೆ ಸಂವಾದ, ಕೈಬರಹ ಮತ್ತು ಕ್ಯಾಲಿಗ್ರಫಿ ಮುಂತಾದ ಚಟುವಟಿಕೆಗಳನ್ನು ಚಟುವಟಿಕೆಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು.

ಸಾಯಂಕಾಲ ಸಮಾರೋಪ ಸಮಾರಂಭ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಆಶಾಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರವೀಣ್ ಹೆಬ್ಬಾರ್, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರು ಇವರು ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಚೇತನಾಕ್ಷಿ ಶಿಕ್ಷಣ ಸಂಯೋಜಕರು, ಪ್ರತಿಮಾ ಸಮೂಹ ಸಂಪನ್ಮೂಲ ವ್ಯಕ್ತಿಗಳು, ರುಕ್ಮಯ್ಯ ಪೂಜಾರಿ ಎಸ್. ಡಿ. ಎಂ. ಸಿ ಅಧ್ಯಕ್ಷರು, ಗೋಪಾಲ್ ಮುಖ್ಯ ಗುರುಗಳು ಉಪಸ್ಥಿತರಿದ್ದರು.

Exit mobile version