ಬೆಳ್ತಂಗಡಿ: ಕಕ್ಕಿಂಜೆ ಅಣಿಯೂರು ಸ. ಹಿ. ಪ್ರಾ. ಶಾಲಾ 15 ಮಕ್ಕಳಿಗೆ ಹೆಜ್ಜೆನು ದಾಳಿ ಮಾಡಿದ ಘಟನೆ ಫೆ.18ರಂದು ನಡೆದಿದೆ.
ಹೆಜ್ಜೆನು ಫೆ.17ರಂದು ಕಾಣಿಸಿಕೊಂಡಿದೆ ಶಾಲಾ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಿದ್ದರು. ಫೆ.18ರಂದು ಬೆಳಗ್ಗಿನ ಜಾವ 15 ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದು, ತಕ್ಷಣ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಅಸ್ವಸ್ಥರಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಶಾಲೆಯ ಸುತ್ತ ಹೆಚ್ಚೇನುಗಳು ಸುತ್ತಾಡುತ್ತಿದ್ದು ಸ್ಥಳೀಯರು ಬೆಂಕಿ ಹೊಗೆ ಹಾಕಿ ಹೆಚ್ಚೇನುಗಳನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶಾಲೆಗೆ ರಜೆಯನ್ನು ಘೋಷಣೆ ಮಾಡಿದ್ದಾರೆ.