Site icon Suddi Belthangady

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಸ್ವ ಉದ್ಯೋಗ ತರಬೇತಿಯ ಉದ್ಘಾಟನೆ

ಕಲ್ಲೇರಿ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ನೇತೃತ್ವದಲ್ಲಿ,1 ತಿಂಗಳ ಬಟ್ಟೆ ಕಸೂತಿ ತಯಾರಿಕೆಯ(ಆರಿ ವರ್ಕ್ )ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಫೆ 17ರಂದು ಕಲ್ಲೇರಿ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ ತರಬೇತಿ ಉದ್ಘಾಟಿಸಿದರು. ಭಾಗವಹಿಸಿದ ಮಹಿಳೆಯರಿಗೆ ಬಹಳ ನಾಜುಕಾದ ತರಬೇತಿಯನ್ನು ಉತ್ತಮ ಮಟ್ಟದಲ್ಲಿ ಪಡೆದು ಮಹಿಳೆಯರು ಮುಂದೆ ಹೆಚ್ಚಿನ ಕೌಶಲ್ಯ ಪಡೆಯಲು ಪ್ರೇರೇಪಿಸಿದರು. ಅದೇ ರೀತಿ ತರಬೇತಿ ಪಡೆದು ಸ್ವ ಉದ್ಯೋಗ ಪ್ರಾರಂಭಿಸಲು ಸಲಹೆ ನೀಡಿದರು.

ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೇರುಕಟ್ಟೆ ಟೈಲರ್ ಒಕ್ಕೂಟದ ಅಧ್ಯಕ್ಷ ಉಮೇಶ್ ಶೆಟ್ಟಿ ಕಸೂತಿ ಕೆಲಸದ ಮಹತ್ವ ವಿವರಿಸಿದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ತರಬೇತಿಯ ನಿಯಮಗಳ ಬಗ್ಗೆ ವಿವರಿಸಿ ಮಹಿಳೆಯರಿಗೆ ಶುಭ ಕೋರಿದರು. ತರಬೇತುದಾರರಾದ ಶುಭಲತಾ, ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲ್ಲೇರಿ ಗ್ರಾಮ ವ್ಯಾಪ್ತಿಯ ಸುತ್ತ ಮುತ್ತ ಊರಿನ ಸುಮಾರು 25 ಮಹಿಳೆಯರು ಈ 1 ತಿಂಗಳ ತರಬೇತಿ ಪಡೆಯಲಿದ್ದಾರೆ.

Exit mobile version